ಕೊರೊನಾ ; ಮುನ್ನೆಚ್ಚರಿಕೆ ಕ್ರಮ

 
ಕೊರೊನಾ ವೈರಸ್ ಈ ಹೆಸರೇ ಜನರಲ್ಲಿ ಭಯ ಹುಟ್ಟಿಸುತ್ತಿದೆ. ಈ ವೈರಸ್ ತಡೆಗಟ್ಟಲು ಇಡೀ ವಿಶ್ವವೇ ಪ್ರಯತ್ನಿಸುತ್ತಿದೆ. ಈ ರೋಗ ಏಕಿಷ್ಟು ಭಯಾನಕ ಎಂದರೆ ಕೊರೊನಾ ಸೋಂಕು ಇರುವ ವ್ಯಕ್ತಿಯನ್ನು ಮುಟ್ಟಿದಾಗ, ಆ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಅ ವ್ಯಕ್ತಿ ಮುಟ್ಟಿದಂಥ ವಸ್ತುಗಳನ್ನು ಮುಟ್ಟಿದಾಗ ರೋಗ ಹರುವುದರಿಂದ ಈ ರೋಗ ತಡೆಗಟ್ಟುವುದು ಹೇಗೆ ಎಂಬುವುದೇ ಸವಾಲಿನ ಸಂಗತಿಯಾಗಿದೆ. ಈ ರೋಗ ತಡೆಗಟ್ಟಲು ರೋಗ ಇರುವ ವ್ಯಕ್ತಿ ಹರಡದಂತೆ ಎಚ್ಚರವಹಿಸಬೇಕು, ಆರೋಗ್ಯವಂತ ವ್ಯಕ್ತಿ ಕೂಡ ಇದು ಹರಡದಂತೆ ಮುನ್ನೆಚ್ಚರಿಕೆಯಿಂದ ಇರಬೇಕು. ಈ ರೋಗಕ್ಕೆ ಯಾವುದೇ ಮದ್ದು ಇದುವರೆಗೆ ಕಂಡು ಹಿಡಿಯದ ಕಾರಣ, ಮುನ್ನೆಚ್ಚರಿಕೆ ಕ್ರಮದಿಂದ ನಿಯಂತ್ರಣ ಮಾಡುವುದೇ ಸದ್ಯಕ್ಕಿರುವ ಪರಿಹಾರವಾಗಿದೆ.
ಕೊರೊನಾ ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸಲಹೆಗಳು
ಕೈಯನ್ನು ಸೋಪ್ ಅಥವಾ ಆಲ್ಕೋಹಾಲ್ ಅಂಶವಿರುವ ಹ್ಯಾಂಡ್‌ವಾಶ್‌ನಲ್ಲಿ ಚೆನ್ನಾಗಿ ತೊಳೆಯಿರಿ. ಸೋಪ್‌ನಲ್ಲಿ ಆಲ್ಕೋಹಾಲ್ ಅಂಶವಿದ್ದರೆ ಒಳ್ಳೆಯದು.
* ರೋಗವಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ.
* ಕೆಮ್ಮುವಾಗ, ಸೀನುವಾಗ ಟಿಶ್ಯೂ ಬಳಸಿ, ನಂತರ ಅದನ್ನು ಕಸದ ಬುಟ್ಟಿಗೆ ಹಾಕಿ, ಕೈ ತೊಳೆಯಿರಿ.
* ಮೊಟ್ಟೆ, ಮೀನು, ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು.
* ಮಾಂಸದ ಮಾರುಕಟ್ಟೆಗೆ ಭೇಟಿಕೊಡಬೇಡಿ, ಅಲ್ಲಿಗೆ ಭೇಟಿ ಕೊಡುವುದಾದರೂ ಮಾಸ್ಕ್ ಧರಿಸಿ, ಕೈಯಿಂದ ಮಾಂಸವನ್ನು ಮುಟ್ಟಬೇಡಿ
. * ಸಾರ್ವಜನಿಕ ಸ್ಥಳದಲ್ಲಿ ಉಗುಳಬೇಡಿ.
* ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿ. ಪರೀಕ್ಷೆಗೆ ಹೋಗುವಾಗ ಮತ್ತೊಬ್ಬರಿಗೆ ಹರದಂತೆ ಎಚ್ಚರವಹಿಸಿ.
* ಮಾಸ್ಕ್ ಧರಿಸಿ, ಆಗಾಗ ಮಾಸ್ಕ್ ಮುಟ್ಟಬೇಡಿ.
* ಹುಷಾರು ಇಲ್ಲದ ಪ್ರಾಣಿಗಳಿಂದ ದೂರವಿಡಿ.

Leave a Comment