ಕೊರೊನಾ ಭೀತಿ : ರಂಗಣ್ಣ ಮಾನಸೀಕ ಅಸ್ವಸ್ಥ

ರಾಯಚೂರು.ಮಾ.26- ಕೊರೊನಾ ಭೀತಿಗೆ ಜಿಲ್ಲೆಯ ಜನ ತತ್ತರಿಸಿದ್ದು, ಹಲವರು ಮನೆಯಿಂದ ಹೊರ ಬಾರದಿದ್ದರೇ, ಇನ್ನೂ ಕೆಲವರು ಮಾನಸೀಕ ರೋಗಿಗಳಾಗಿದ್ದಾರೆ. ಇಂತಹದೊಂದು ಪ್ರಕರಣ ದೇವದುರ್ಗ ತಾಲೂಕಿನ ಜಾಲಹಳ್ಳಿ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
ಜಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ರಂಗಣ್ಣ ತಂದೆ ದಂಡಣ್ಣ ಎನ್ನುವ ವ್ಯಕ್ತಿ ಕೊರೊನಾ ಸುದ್ದಿ ನೋಡಿ ಮಾನಸೀಕ ಅಸ್ವಸ್ಥನಾಗಿದ್ದಾನೆ. ಈತನ ಅಸ್ವಸ್ಥತೆ ಕಂಡು ಅವರ ಮನೆಯವರು ಅವರನ್ನು ಇತ್ತೀಚಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಕರೆದುಕೊಂಡು ಹೋದಾಗ ಅವರಲ್ಲಿ ಮಾನಸೀಕ ಅಸ್ವಸ್ಥತೆ ಬಯಲಾಗಿದೆ. ವೈದ್ಯರ ಮುಂದೆ ರಂಗಣ್ಣ ಹೇಳುವ ರೀತಿ ಕೊರೊನಾದ ಸುದ್ದಿಗಳಿಗೆ ಈತ ಮಾನಸೀಕ ಅಸ್ವಸ್ಥತೆಗೆ ಗುರಿಯಾಗಿದ್ದಾನೆಂದು ಸ್ಪಷ್ಟಗೊಂಡಿದೆ.
ಹುಲಿ ಮನೆಯವರು ರೋಗಿಯನ್ನು ತಪಾಸಣೆ ನಡೆಸಿದ ನಂತರ ಯಾವುದೇ ಕೊರೊನಾ ಪ್ರಕರಣ ರಾಯಚೂರಿನಲ್ಲಿಲ್ಲ. ಈ ಬಗ್ಗೆ ಯಾವುದೇ ಆತಂಕ ಪಡುವುದು ಬೇಡವೆಂದು ಮಾನಸೀಕ ಅಸ್ವಸ್ಥ ವ್ಯಕ್ತಿಗೆ ಸಮಾಧಾನ ಪಡಿಸಿದರು. ಆದರೆ, ಎಷ್ಟೇ ಸಮಾಧಾನ ಪಡಿಸಿದರೂ, ಕೊರೊನಾ ಬಗ್ಗೆ ತನಗೀರುವ ಭೀತಿಯನ್ನು ಪದೇ ಪದೇ ರಂಗಣ್ಣ ವೈದ್ಯರ ಮುಂದೆ ವ್ಯಕ್ತಪಡಿಸುತ್ತವೇ ಇದ್ದರು.
ಕೊರೊನಾ ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೆ ಗುರಿ ಮಾಡಿದಂತೂ ಸತ್ಯ. ವಿದ್ಯುನ್ಮಾನಗಳಲ್ಲಿ ಬರುವ ಸುದ್ದಿಗೆ ಜನ ಮಾನಸೀಕ ಅಸ್ವಸ್ಥಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Comment