ಕೊರೊನಾ ತಡೆಗೆ ಸಂಸದರಿಂದ ಅಧಿಕಾರಿಗಳ ಸಭೆ

ಸಿರುಗುಪ್ಪ, ಏ.2: ನಗರದ ತಹಶೀಲ್ದಾರ ಕಛೇರಿಯಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ನಂತರ ಮಾತನಾಡಿದ ಅವರು ಕೋವಿಡ್-19 (ಕೊರೋನಾ ವೈರಸ್) ಸಾಂಕ್ರಾಮಿಕ ರೋಗವು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈಗಾಗಲೇ ರಾಜ್ಯದ್ಯಾಂತ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ನಗರ ಪ್ರದೇಶಗಳಲ್ಲಿ ಸಾರ್ವಜನಿಕರು ಹೊರಬರದಂತೆ ತಾಲೂಕಿನಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಇಲಾಖಾ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಿದರು.

ಸಮಾಜ ಕಲ್ಯಾಣ ಇಲಾಖೆಯು ಬಡವರಿಗೆ ಮತ್ತು ನಿರಾಶ್ರಿತರು ಹಸಿವಿನಿಂದ ಇರದೇ ಇರಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ಪಡೆದರು, ನಗರಸಭೆ ಮತ್ತು ಸಂಘ ಸಂಸ್ಥೆಗಳೂ ಅಹಾರ ಪೂರೈಕೆ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ. ಆದರೆ ಇದರ ಬಗ್ಗೆ ಸ್ಪಷ್ಟ ಮಾಹಿತಿ ಜಾಗೃತಿ ವಹಿಸುವಂತೆ ತಿಳಿಸಿದರು.

ಗ್ರಾಮಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸ್ಯಾನಿಟೈಜರ್, ಮಾಸ್ಕ್, ಯಾವುದೇ ಕೊರತೆಯಾದಂತೆ ಮುಂಜಾಗೃತವಾಗಿ ನಿಗವಹಿಸ ಸೂಚಿಸಿದರು.
ಕೋವಿಡ್-19 ವೈರಾಣು ತಡೆಯಲು ದೇಶವು ಲಾಕ್ ಡೌನ್ ಮಾಡಿದ್ದು ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾದಂತೆ ಕೇಂದ್ರ ಮತ್ತು ರಾಜ್ಯ ಸರಕಾರವು ಕೈಗೊಂಡಿರುವ ಮಹತ್ವ ಯೋಜನೆಗಳ ಬಗ್ಗೆ ತಾಲ್ಲೂಕು ಆಡಳಿತ ನಿಗವಹಿಸಿ ಜಾರಿಯಲ್ಲಿ ತರುವಂತೆ ಕಾರ್ಯಮುನ್ಮೋಖರಾಗಬೇಕು, ಕೋರೋನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಬೇಕಾದರೆ ಸಂಪೂರ್ಣ ಲಾಕ್ ಡೌನ್ ಸೂಚನೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಿ, ಯಾವುದೇ ಕುಂದು ಕೊರತೆಗಳು ಕಂಡು ಬಂದರೆ ನಮ್ಮ ಗಮನಕ್ಕೆ ತಂದು ಅವುಗಳನ್ನು ಪೂರೈಸಿಕೊಳ್ಳಿ, ಪ್ರತಿನಿತ್ಯ ಇಲ್ಲಿನ ವರದಿಯನ್ನು ಶಾಸಕರಿಗೂ ಮತ್ತು ನಮಗೂ ಮಾಹಿತಿಯನ್ನು ನೀಡಬೇಕು, ವೈದ್ಯರು ನಿಜವಾಗಿಯೂ ದೇವರ ಸ್ವರೂಪವಾಗಿದ್ದು ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ದೆಹಲಿಯ ನಿಜಾಮುದ್ದಿನ್ ಮಸೀದಿ ಘಟನೆ ಹಿನ್ನಲೆ ಇಂದು ನಗರದಲ್ಲಿ ಅವರುಗಳನ್ನು ಹೋಂ ಕ್ಚಾರೈಂಟೆನ್ ಮಾಡಿ ಅವರ ಬಗ್ಗೆ ನೀಗವಹಿಸಲಾಗಿದೆ, ಮೊರಾರ್ಜಿ ದೇಸಾಯಿ ಶಾಲೆಯನ್ನು ಅಣಿಯಾಗಿಟ್ಟು ಕೊಳ್ಳಲಾಗಿದೆ, ಕೊವಿಡ್‍ಗಾಗಿ ಎರೆಡು ಪ್ರತ್ಯೇಕ ಅಂಬುಲೆನ್ಸ್ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸುರೇಶಗೌಡ ತಿಳಿಸಿದರು.

ಹಳ್ಳಿಗಳಲ್ಲಿ ಅಂಗನವಾಡಿ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ಸೇರಿಸಿಕೊಂಡು ಗ್ರಾಮಗಳಲ್ಲಿ ರಾಸಾಯನಿಕ ಮಿಶ್ರಣ ಔಷಧಿಯನ್ನು ಸಿಂಪಡಣೆ ಮಾಡುವ ಮೂಲಕ ಸ್ವಚ್ಚತೆ ಕಾಪಾಡುವುದರೊಂದಿಗೆ ಕೋರೊನಾ ವೈರಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಇ.ಒ ಶಿವಪ್ಪ ಸುಬೇದರ್ ತಿಳಿಸಿದರು.

Leave a Comment