ಕೊರೊನಾ ತಡೆಗೆ ಫುಟ್ಬಾಲ್ ಆಟಗಾರ ನೇಮಾರ್ ದೇಣಿಗೆ

ರಿಯೊ ಡಿ ಜನೈರೊ, ಏ ೪ – ಜಗತ್ತಿನಾದ್ಯಂತ ಕೊರೊನಾ ಸೋಂಕು ತಾಂಡವಾಡುತ್ತಿರುವ ಹಿನ್ನಲೆಯಲ್ಲಿ ಬ್ರೆಜಿಲ್ ನ ನೇಮಾರ್ ವೈರಸ್‌ಗೆ ಕಡಿವಾಣ ಹಾಕಲು ಭಾರಿ ಮೊತ್ತದ ದೇಣಿಗೆ ನೀಡಿದ್ದಾರೆ.

ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಬ್ರೆಜಿಲ್ ನ ನೇಮಾರ್ ಕೊರೊನಾ ಹಾವಳಿ ತಡೆಯಲು ಒಂದು ದಶಲಕ್ಷ ಅರಿಕನ್ ಡಾಲರ್ ಮೊತ್ತವನ್ನು ದೇಣಿಗೆ ನೀಡಿದ್ದಾರೆ.

ಈ ಹಣವನ್ನು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಮತ್ತು ದೂರದರ್ಶನ ನಿರೂಪಕ ಲೂಸಿಯಾನೊ ಹಕ್ ಪ್ರಾರಂಭಿಸಿದ ಚಾರಿಟಿ ಅಭಿಯಾನದ ನಡುವೆ ವಿಂಗಡಿಸಲಾಗಿದೆ ಎಂದು ಬ್ರೆಜಿಲಿಯನ್ ಟಿವಿ ನೆಟ್ವರ್ಕ್ ತಿಳಿಸಿದೆ.

ಈ ನಡುವೆ “ನಾವು ಎಂದಿಗೂ ದೇಣಿಗೆ ಅಥವಾ ಮೊತ್ತದ ಬಗ್ಗೆ ಮಾತನಾಡುವುದಿಲ್ಲ” ಎಂದು ನೇಮಾರ್ ಅವರ ನಿರ್ವಹಣಾ ತಂಡ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ನೇಮಾರ್ ಮತ್ತು ಡ್ಯುಯಲ್ ವರ್ಲ್ಡ್ ಸರ್ಫಿಂಗ್ ಚಾಂಪಿಯನ್ ಗೇಬ್ರಿಯಲ್ ಮದೀನಾ ಅವರ ಬೆಂಬಲದೊಂದಿಗೆ ಕಳೆದ ವಾರ ಅಗತ್ಯವಿರುವವರಿಗೆ ನಿಧಿಸಂಗ್ರಹಣೆ ಬಗ್ಗೆ ಘೋಷಿಸಿದ್ದರು.

ದೇಶದಲ್ಲಿ ೯,೦೦೦ ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ೩೫೯ ಸಾವುಗಳು ಈವರೆಗೆ ಗೆ ಸಂಭವಿಸಿದೆ ಬ್ರೆಜಿಲ್ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

Leave a Comment