ಕೊರೊನಾವೈರಸ್ ಕ್ಯಾರ ಎನ್ನದ ಭಾರತದ ಹುಡುಗ, ಚೀನಿ ಹುಡುಗಿ

ನವದೆಹಲಿ, ಫೆ 3- ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ತಲ್ಲಣಗೊಂಡಿರುವ ಬೆನ್ನಲೇ ಭಾರತದ ಹುಡುಗನೊಬ್ಬ ಚೀನಿ ಹುಡುಗಿಯನ್ನು ವಿವಾಹವಾಗಿ ಗಮನ ಸೆಳೆದಿದ್ದಾನೆ.

ಹೌದು ಕೊರೋನಾ ವೈರಸ್‌ಗೆ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೇ ಚೀನಾದಿಂದ ಭಾರತಕ್ಕೆ ಪ್ರಯಾಣ ಬೆಳೆಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾವಹಿಸಲಾಗಿದ್ದು, ಆದರೆ ಇದನ್ನು ಅಲ್ಲಗೆಳೆದ ಈ ಜೋಡಿಗಳು ಭಾರತ ಹಾಗೂ ಚೀನಿ ಸಂಪ್ರದಾಯದಲ್ಲಿ ಮದುವೆ ಮಾಡಿಕೊಂಡು ಕೊರೊನಾ ವೈರಸ್‌ಗೆ ಸಡ್ಡು ಹೊಡೆದಿದ್ದಾರೆ.

ಮಧ್ಯಪ್ರದೇಶದ ಮಾಂಡ್ಸೌರ್‌ನಲ್ಲಿ ನಡೆದ ವಿವಾಹದಲ್ಲಿ ಸಿದಾರ್ಥ ಹಾಗೂ ಚೀನಾದ ಹುಡುಗಿ ಕೊರೊನಾ ವೈರಸ್ ಸಪ್ತಪದಿ ತುಳಿದು ಸುದ್ದಿ ಮಾಡಿದ್ದಾರೆ. ಮದುಮಗಳು ಜಿಹಾವೊ ವಾಂಗ್ ಮತ್ತು ಅವರ ಕುಟುಂಬ ಕಳೆದ ಬುಧವಾರ ಮಾಂಡ್ಸೌರ್‌ಗೆ ಆಗಮಿಸಿದಾಗಿನಿಂದ ಆರೋಗ್ಯ ಇಲಾಖೆಯ ಆರು ವೈದ್ಯರು ಜಿಹಾವೊ ಅವರ ಕುಟುಂಬದ ಸದಸ್ಯರನ್ನು ಸತತವಾಗಿ ಪರೀಕ್ಷಿಸುತ್ತಿದೆ ಎಂದು ಮಾಂಡ್ಸೌರ್ ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಕೆ.ಮಿಶ್ರಾ ತಿಳಿಸಿದ್ದಾರೆ.

chini-girl1

ಆದರೆ ಅವರಲ್ಲಿ ಕೊರೋನವೈರಸ್ ಯಾವುದೇ ಲಕ್ಷಣ ಕಂಡುಬಾರದೆ ಇದ್ದರೂ ಇದನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆ ಮಾಡಿದ್ದೇವೆ. ಯಾವುದೇ ರೋಗಲಕ್ಷಣವನ್ನು ಕಂಡ ತಕ್ಷಣ ನಾವು ಅವರನ್ನು ಆಸ್ಪತ್ರೆಗೆ ದಾಖಲಿಸುತ್ತೇವೆ ಎಂದೂ ಡಾ ಮಿಶ್ರಾ ಹೇಳಿದರು.

ಸುಮಾರು ೫ ವರ್ಷಗಳ ಹಿಂದೆಯೇ ಕೆನಾಡದಲ್ಲೇ ಓದುವಾಗಲೇ ಈ ಇಬ್ಬರ ನಡುವೆ ಪ್ರೇಮ ಶುರುವಾಗಿ, ಇದೀಗ ಕೊರೋನಾ ವೈರಸ್ ಭೀತಿಯಲ್ಲೂ ಮದುವೆಯಾಗಿ ಈ ಇಬ್ಬರು ತಮ್ಮ ಪ್ರೀತಿ ಗಟ್ಟಿ ಎಂದು ತೋರಿಸಿದ್ದಾರೆ. ಮದುವೆಗೆ ಚೀನಾದಿಂದ ಹುಡುಗಿ ತಂದೆ ತಾಯಿ ಕೆಲವು ಆಪ್ತ ನೆಂಟರು ಬಂದಿದ್ದಾರೆ. ಅಪ್ಪ -ಅಮ್ಮನ ಆಶೀರ್ವಾದ ಪಡೆದು ಮದುವೆಯಾಗಲು ಇಲ್ಲಿಯವರೆಗೆ ಕಾದಿದೆ ಎಂದು ಚೀನಿ ಹುಡುಗಿ ಬಹಳ ಖುಷಿಯಿಂದಲೇ ಹೇಳಿಕೊಂಡಿದ್ದಾಳೆ. ಇನ್ನು ಆಕೆಯ ಪೋಷಕರು ಸಹ ಭಾರತ ಸಂಪ್ರದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ಸೇರಿದಂತೆ ೨೫ ದೇಶಗಳಿಗೆ ಸೋಂಕು ಹರಡಿರುವ ಕಾರಣದಿಂದ ಭಾರತ ಚೀನಾ ಪ್ರಯಾಣಿಕರು ಮತ್ತು ಚೀನಾ ಮೂಲದ ವಿದೇಶಿಯರಿಗೆ ಇ-ವೀಸಾ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Leave a Comment