ಕೊರೆಯುವ ಚಳಿಯಲ್ಲೂ ಲಾ ಅಲ್ಟ್ರಾ ಸ್ಪರ್ಧೆ

ಇಂದು ಜಗತ್ತಿನಲ್ಲಿ ಸಾಹಸ ಪ್ರವೃತ್ತಿಗಳೇ ಹೆಚ್ಚು ಪ್ರಾಧ್ಯಾನತೆ ಪಡೆದಿದೆ. ಅಸಾಧ್ಯವಾದುದನ್ನು ಸಾಧಿಸುವ ಮನೋ ಪ್ರವೃತ್ತಿ ಬೆಳೆಯುತ್ತಿದೆ. ಅನೇಕ ಸಾಹಸಿ ಸಂಘಸಂಸ್ಥೆಗಳು ಊಹಿಸಲು ಆಗದಂತಹ ಮೈ ಜುಂ ಎನಿಸುವಂತಹ ಸಾಹಸ ಕ್ರೀಡೆಗಳನ್ನು ನಡೆಸುವ ಮೂಲಕ ವೀಕ್ಷಕರನ್ನು ತುದಿಗಾಲಿಗೆ ನಿಲ್ಲಿಸುತ್ತಿವೆ.ಇಂತಹ ಸಾಹಸ ಕ್ರೀಡೆಗೆ ಇದೊಂದು ತಾಜಾ ನಿದರ್ಶನ.ಅಲ್ಲಿ ಯಾರು ಊಹಿಸದಂತಹ ಚಳಿ. ಐದು ನಿಮಿಷ ನಿಂತರೆ ಸಾಕು ಮೈಯನ್ನೇ ಕೊರೆದು ಬಿಡುವ ರಾಕ್ಷಸಿ ಚಳಿ. ಇಲ್ಲಿ ಒಂದರಗಳಿಗೆ ನಿಲ್ಲಬೇಕು ಎಂದರೂ ಗುಂಡಿಗೆಯೇ ಬೇಕು.

ಇಂತಹ ಸಾಹಸ ಕ್ರೀಡೆಯೊಂದು ಲಡಾಕನ ಚಳಿ ಪ್ರದೇಶದಲ್ಲಿ ಆಗಸ್ಟ್ ೧೭ ರಂದು ನಡೆಯಲಿದೆ. ವಿವಿಧ ಸ್ಪರ್ಧಾಳುಗಳ ನಡುವೆ ಮುಂಬೈ ಸಾಹಸಿಗ, ಮ್ಯಾರಥಾನ್ ತರಬೇತುದಾರ ಹಾಗೂ ಎಕ್ಸ್ ಟ್ರೀಮ್ ಸ್ಪೋರ್ಟ್ ಇಂಡಿಯಾ ಸಂಸ್ಥಾಪಕ ರಾಜ್ ವಡ್ಗಾಮ್ ಚಳಿಗೆ ಎದೆಯೊಡ್ಡಿ ಓಡಲಿದ್ದಾರೆ.

ಈ ಸಾಹಸ ಕ್ರೀಡೆಗೆ ಲಾ ಅಲ್ಟ್ರಾ ಎಂದು ಹೆಸರಿಡಲಾಗಿದೆ. ಸ್ಪರ್ಧಾಳುಗಳು ಖರದುಂಗ್ಲಾದ (೧೮,೩೮೦ ಅಡಿ) ಲಾ ವಾರಿಯ (೧೭,೫೦೦ ಅಡಿ) ಮೂಲಕ ಓಡಬೇಕು.ಇಲ್ಲಿನ  ವಾತಾವರಣವೇ ಭಯ ಹುಟ್ಟಿಸುತ್ತದೆ. ಸಮುದ್ರ ಮಟ್ಟದಲ್ಲಿ ಇರುವುದಕ್ಕಿಂತ ಶೇ. ೫೦ ರಷ್ಟು ಕಡಿಮೆ ಇದೆ. ಇದು ಸ್ಪರ್ಧಿಗಳ ಉಸಿರಾಟದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಇದೆಲ್ಲ ಗೊತ್ತಿದ್ದರೂ ರಾಜ್ ವಡ್ಗಾಮ್ ಚಳಿಯನ್ನು ಲೆಕ್ಕಿಸದೆ ೨೨೨ ಕಿ.ಮೀ. ದೂರದ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ. ಲಾ ಅಲ್ಟ್ರಾ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ದೈಹಿಕ ಮತ್ತು ಮಾನಸಿಕ ಮಿತಿ ಏನೆಂಬುದನ್ನು ಮತ್ತೊಮ್ಮೆ ಪ್ರದರ್ಶಿಸಲಿದ್ದಾರೆ.

ಚಳಿಯ ನಡುವೆ ಕೇವಲ ೪೮ ಗಂಟೆಗಳಲ್ಲಿ ೨೨೨ ಕಿ.ಮೀ. ದೂರ ಕ್ರಮಿಸುವುದು ಅಷ್ಟು ಸುಲಭವಲ್ಲ. ಪ್ರಕೃತಿಗೆ ವಿರುದ್ಧವಾಗಿ ನಡೆಯುವುದು ಅಪಾಯವನ್ನು ಆಹ್ವಾನ ಮಾಡಿಕೊಂಡಂತೇ ಏನೇ ಆಗಲಿ ಸ್ಪರ್ಧೆಗೆ ಇಳಿದಿದ್ದೇನೆ. ಗೆಲುವು ಪಡೆಯುತ್ತೇನೆ ಎಂಬ ಆತ್ಮವಿಶ್ವಾಸ ತೋರುತ್ತಾರೆ.

ದೇಶದಲ್ಲಿ ನಡೆದ ೧೦ ಸಾವಿರ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ರಾಜ್ ವಡ್ಗಾಮ್. ಇದರಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೌರವಕ್ಕೂ ಭಾಜನರಾಗಿದ್ದಾರೆ.

ಈಚೆಗಷ್ಟೇ ನಡೆದ ಕಾರ್ಗಿಲ್ ಅಂತರರಾಷ್ಟ್ರೀಯ ಮ್ಯಾರಥಾನ್‌ನಲ್ಲಿ ೧೬೦ ಕಿ.ಮೀ. ದೂರವನ್ನು ಕೇವಲ ೨೮.೩೦ ತಾಸುಗಳಲ್ಲಿ ಪೂರ್ಣಗೊಳಿಸಿದ್ದರು. ಲಾ ಅಲ್ಟ್ರಾ ಸ್ಪರ್ಧೆ ಕೂಡ ರಾಜ್ ವಡ್ಗಾಮ್‌ಗೆ ಸವಾಲಾಗಿ ಪರಿಣಮಿಸಿದೆ. ಗುರಿ ಸಾಧಿಸಲು ನಿರ್ಧಾರ ತೆಗೆದುಕೊಂಡಾಗಿದೆ. ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇನೆ ಎಂದು ಮಾತು ಮುಗಿಸುತ್ತಾರೆ.

Leave a Comment