ಕೊಪಾ ಅಮೆರಿಕ: ಬೊಲೊವಿಯಾ ವಿರುದ್ಧ ಗೆದ್ದು ಬ್ರೆಜಿಲ್‌ ಶುಭಾರಂಭ

ಸಾವೊ ಪಾಲೊ, ಜೂ 15 (ಕ್ಸಿನ್ಹುವಾ) ದ್ವಿತೀಯಾರ್ಧದಲ್ಲಿ ಫಿಲಿಪ್‌ ಕೌಂಟಿನ್ಹೊ ಗಳಿಸಿದ ಎರಡು ಗೋಲುಗಳ ಸಹಾಯದಿಂದ ಬ್ರೆಜಿಲ್‌ ತಂಡ ಕೊಪಾ ಅಮೆರಿಕಾ ಟೂರ್ನಿಯ ಆರಂಭಿಕ ಪಂದ್ಯದಲ್ಲಿ

ಬೊಲಿವಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಶುಕ್ರವಾರ ಇಲ್ಲಿನ ಮೊರುಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫಿಲಿಪ್ ಕೌಂಟಿನ್ಹೂ (50 ಮತ್ತು 53ನೇ ನಿ.)  ಹಾಗೂ ಎವರಟನ್‌ ಸೋರ್ಸ್‌ (85ನೇ ನಿ.) ಅವರ ಗಳಿಸಿದ ಗೋಲುಗಳ ನೆರವಿನಿಂದ ಬ್ರೆಜಿಲ್‌ 3-0 ಅಂತರದಲ್ಲಿ ಬೊಲಿವಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿತು.

ಮೊದಲಾರ್ಧದಲ್ಲಿ ಉಭಯ ತಂಡಗಳ ನಡುವೆ ಭಾರಿ ಕಾದಾಟ ನಡೆಯಿತು. ಆದರೂ ಗೋಲು ಗಳಿಸುವಲ್ಲಿ ಎರಡೂ ತಂಡಗಳಿಂದ ಸಾಧ್ಯವಾಗಲಿಲ್ಲ. ಈ ವೇಳೆ ಆತಿಥೇಯ ಬ್ರೆಜಿಲ್‌ ತಂಡದಲ್ಲಿ ನೇಯ್ಮಾರ್‌ ಅವರ ಅನುಪಸ್ಥಿತಿ ಸಾಕಷ್ಟು ಕಾಡಿತು.

ಪಂದ್ಯದ ಬಳಿಕ ಮಾತನಾಡಿದ ಕೌಂಟಿನ್ಹೊ, ” ಈ ಪಂದ್ಯ ನಮಗೆ ಕಠಿಣವಾಗಿತ್ತು. ಮೊದಲಾರ್ಧದಲ್ಲಿ ತಂಡದ ಕೋಚ್‌ ಟೀಟೆ ಅವರು ಹೆಚ್ಚು ಹಮನ ಕೇಂದ್ರಿಕರಿಸಿ ಹಾಗೂ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಂತೆ ಸಲಹೆ ನೀಡಿದ್ದರು. ಹಾಗಾಗಿ, ಅವರು ಹೇಳಿದ ಮಾರ್ಗವನ್ನೇ ನಾವು ಅನುಸರಿಸಿದೆವು. ಮೊದಲ ಗೋಲು ಗಳಿಸಿದ ಬಳಿಕ ಪಂದ್ಯದ ಸ್ಥಿತಿ ಬದಲಾಯಿತು” ಎಂದು ಹೇಳಿದರು.

Leave a Comment