ಕೊನೆಗೂ ಉದ್ಘಾಟನೆಗೊಂಡ ತೊಕ್ಕೊಟ್ಟು ಫ್ಲೈ ಓವರ್!

ಮಂಗಳೂರು, ಜೂ.೧೩- ಬಹುಕಾಲದಿಂದ ಕಾಮಗಾರಿ ನಡೆಯುತ್ತಿದ್ದ ತೊಕ್ಕೊಟ್ಟು ಫ್ಲೈಓವರ್ ಇಂದು ಮುಂಜಾನೆ ಲೋಕಾರ್ಪಣೆಗೊಂಡಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮೇಲ್ಸೇತುವೆಯನ್ನು ಉದ್ಘಾಟನೆಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು. ಕಳೆದ ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಫ್ಲೈಓವರ್ ಕಾಮಗಾರಿಯಿಂದ ವಾಹನ ಸಂಚಾರ ದುಸ್ತರವಾಗಿತ್ತು. ಸ್ಥಳೀಯ ನಿವಾಸಿಗಳಿಗೆ ಇದರಿಮದ ಸಾಕಷ್ಟು ತೊಂದರೆಯಾಗುತ್ತಿತ್ತು. ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಆರ್ಥಿಕ ಅಡಚಣೆಯಿಂದ ಅಮೆಗತಿಯಲ್ಲಿ ಸಾಗುತ್ತಿರುವ ವಿರುದ್ದ ವ್ಯಾಪಕ ಜನಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ಸಂಸದರ ಶಿಫಾರಸ್ಸಿನ ಮೇರೆಗೆ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ನಡೆಸುವ ಸಂಸ್ಥೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿದ್ದರು.

Leave a Comment