ಕೊತ್ತಂಬರಿ ಕಮಾಲ್

ಮನೆಯಲ್ಲಿ ಹೆಚ್ಚಾಗಿ ನಾವು ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಬಳಕೆ ಮಾಡುತ್ತೇವೆ. ಅಡುಗೆ ಸ್ವಾಧ ಹೆಚ್ಚಾಗಲು ಕೊತ್ತಂಬರಿ ಸೊಪ್ಪನ್ನು ಹಾಕುತ್ತೇವೆ, ದೋಸೆ ಇಡ್ಲಿ ಜೊತೆ ಸವಿಯಲು ಕೂಡ ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡುತ್ತೇವೆ. ಆದರೆ ಇದರಿಂದ ಆರೋಗ್ಯಕರ ಗುಟ್ಟಿನ ಬಗ್ಗೆ ತಿಳಿದಿದ್ದರೇ ಇನ್ನು ಒಳ್ಳೆಯದು ಅಲ್ಲವೇ….
ಕೊತ್ತಂಬರಿ ಸೊಪ್ಪಿನಲ್ಲಿ ಪ್ರೊಟೀನ್, ಫೈಬರ್, ಕಾರ್ಬೋಹೈಡ್ರೇಟ್, ಮಿನರಲ್ ಹೆಚ್ಚಾಗಿ ಇರುತ್ತದೆ. ಅಲ್ಲದೆ ಇದು ಕ್ಯಾಲ್ಶಿಯಂ, ಫಾಸ್ಪರಸ್, ಐರನ್, ಕೆರೋಟಿನ್, ಪೊಟಾಶಿಯಂನ ಆಗರವೂ ಆಗಿದೆ.
ಇದು ರಕ್ತದಲ್ಲಿನ ಶುಗರ್ ಕಂಟ್ರೋಲ್ ಸಹಾಯ ಮಾಡುತ್ತದೆ. ಕೊತ್ತಂಬರಿ ಪುಡಿ, ದೇಹದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್ ಪ್ರಮಾಣ ಹೆಚ್ಚಿಸುತ್ತದೆ.
ಕೊತ್ತಂಬರಿ ಸೊಪ್ಪು ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಇದರ ಜ್ಯೂಸ್ ಮಾಡಿ ಸೇವನೆ ಮಾಡಿದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದರ ಚಟ್ನಿ ಮಾಡಿ ಸೇವನೆ ಮಾಡಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿರುವ ತತ್ವವು ಶರೀರದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸುವ ಮಾಡುವ ಶಕ್ತಿ ಇದೆ. ಇದನ್ನು ನೀರಿನಲ್ಲಿ ಬೇಯಿಸಿ, ಆ ನೀರನ್ನು ಸೇವನೆ ಮಾಡಿದರೆ ಉತ್ತಮ ಪರಿಣಾಮ ದೊರೆಯುತ್ತದೆ.
ನಿಮಗೆ ಪಿಂಪಲ್ ಸಮಸ್ಯೆ ಕಾಡುತ್ತಿದ್ದರೆ ಕೊತ್ತಂಬರಿ ಸೊಪ್ಪನ್ನ ಪೇಸ್ಟ್ ಮಾಡಿ ಅದಕ್ಕೆ ಅರಿಶಿನ ಪುಡಿ ಸೇರಿಸಿ ಪಿಂಪಲ್ ಮೇಲೆ ಹಾಕಿ. ದಿನದಲ್ಲಿ ಎರಡು ಬಾರಿ ಇದನ್ನ ಮಾಡಿ. ಇದರಿಂದ ಪಿಂಪಲ್, ಸುಕ್ಕು, ಮೊದಲಾದ ಚರ್ಮ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತದೆ.
ಪ್ರತಿದಿನ ಕೊತ್ತಂಬರಿ ಸೊಪ್ಪು ಬಳಕೆ ಮಾಡುವುದರಿಂದ ಕಣ್ಣಿನ ದೃಷ್ಟಿ ಶಾರ್ಪ್ ಆಗುತ್ತದೆ. ಆದುದರಿಂದ ನಿಮ್ಮ ಆಹಾರದಲ್ಲಿ ತಪ್ಪದೆ ಈ ಸೊಪ್ಪನ್ನು ಸೇರಿಸಿ.

Leave a Comment