ಕೊಣಚಗಲ್ಲು ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಜಾಂಬವಂತನ ಸೈನ್ಯ…

ದಾವಣಗೆರೆ.ಮೇ.15; ಈ ಬೆಟ್ಟದಲ್ಲಿವೆ ಕಳೆದ ನೂರಾರು ವರ್ಷಗಳಿಂದ ಜಾಂಬವಂತನ ಸೈನ್ಯ. ಇದೂವರೆಗೂ ಯಾರಿಗೂ ತೊಂದರೆ ನೀಡದೆ ಪ್ರತಿನಿತ್ಯ ದೇವಾಲಯದ ಆವರಣದಲ್ಲಿ ಸಂಚರಿಸುತ್ತಿರುವ ಕರಡಿಗಳು ಭಕ್ತರು ನೀಡುವ ಪ್ರಸಾದ ಸೇವಿಸಿ ಮತ್ತೆ ತಮ್ಮ ಸ್ಥಾನಕ್ಕೆ ಮರಳುತ್ತಿವೆ. ಜಿಲ್ಲೆಯ ಜಗಳೂರು ತಾಲ್ಲೂಕಿನ ಕೊಣಚಗಲ್ಲು ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಇಂತಹ ದೃಶ್ಯ ಕಂಡುಬರುತ್ತದೆ. ಅಷ್ಟೇ ಅಲ್ಲ ಇದು ಎಲ್ಲರಲ್ಲಿ ಅಚ್ಚರಿ ಮೂಡುವಂತೆ ಮಾಡಿದೆ. ಮನುಷ್ಯರನ್ನು ಕಂಡ ತಕ್ಷಣ ಹೆದರುವ ಪ್ರಾಣಿಗಳು ತಮ್ಮ ಸುರಕ್ಷತೆಗಾಗಿ ದಾಳಿ ಮಾಡುತ್ತವೆ. ಆದರೆ ಈ ಕ್ಷೇತ್ರದಲ್ಲಿ ಮಾತ್ರ ಕರಡಿಗಳು ಯಾವುದೇ ತೊಂದರೆ ಕೊಡದೆ ಶಾಂತ ರೀತಿಯಲ್ಲಿ ಇರುತ್ತವೆ. ಬೆಟ್ಟದಿಂದ ಸಾಲುಗಟ್ಟಿ ಇಳಿಯುವ ಕರಡಿಗಳ ಹಿಂಡು, ದೇವಾಲಯದ ಆವರಣದಲ್ಲಿ ಸ್ವಚ್ಚಂದವಾಗಿ ಸಂಚರಿಸುತ್ತವೆ. ಜಗಳೂರು ತಾಲ್ಲೂಕಿನಲ್ಲಿರುವ ಕೊಣಚಗಲ್ಲು ರಂಗನಾಥ ಸ್ವಾಮಿ ದೇವಸ್ಥಾನ ಬೆಟ್ಟದ ಮೇಲಿದೆ. ಇದರ ಎದುರು ಮತ್ತೊಂದು ಬೆಟ್ಟವಿದೆ. ಈ ಬೆಟ್ಟದಲ್ಲಿ ಹತ್ತಾರು ಕರಡಿಗಳು ಕಳೆದ 20 ವರ್ಷಗಳಿಂದ ವಾಸವಾಗಿವೆ. ಸಂಜೆಯಾಗುತ್ತಿದ್ದಂತೆ ಕರಡಿಗಳ ಹಿಂಡು ರಂಗನಾಥ ಸ್ವಾಮಿಯ ದೇವಾಲಯದ ಆವರಣಕ್ಕೆ ಆಗಮಿಸುತ್ತವೆ. ಏಕಕಾಲದಲ್ಲಿ ಹತ್ತಾರು ಕರಡಿಗಳು ಈ ದೇವಾಲಯದ ಆವರಣಕ್ಕೆ ಬಂದು ಭಕ್ತರು ಹಾಕಿದ ಬಾಳೆಹಣ್ಣು, ಕೊಬ್ಬರಿ ತಿಂದು ಹೋಗುತ್ತವೆ. ಕಳೆದ 20 ವರ್ಷಗಳಿಂದ ಇದೇ ಬೆಟ್ಟದಲ್ಲಿ ಕರಡಿಗಳು ವಾಸವಾಗಿದ್ದು ಇದೂವರೆಗೂ ಯಾರಿಗೂ ಕೂಡ ತೊಂದರೆಕೊಟ್ಟಿಲ್ಲವಂತೆ, ಅಷ್ಟೇ ಅಲ್ಲಾ ಇಲ್ಲಿಗೆ ಬರುವ ಭಕ್ತರಿಗೂ ಸಹ ಏನೂ ಮಾಡಿಲ್ಲಾ ಎನ್ನುತ್ತಾರೆ ದೇವಸ್ಥಾನದ ಸಿಬ್ಬಂದಿ.

ಇತಿಹಾಸದ ಪ್ರಕಾರ ರಂಗನಾಥ ಸ್ವಾಮಿ ದೇವಾಲಯದ ಎದುರು ಇರುವ ಬೆಟ್ಟದಲ್ಲಿ ನೂರಾರು ವರ್ಷಗಳಿಂದ ಕರಡಿಗಳು ವಾಸವಿವೆ. ಕೊಣಕಗಲ್ಲು ರಂಗನಾಥ ಸ್ವಾಮಿ ಗೆ ಮಂಗಳಾರತಿ ಮಾಡುತ್ತಿದ್ದಂತೆ ಕರಡಿಯೊಂದು ರಂಗನಾಥ ಸ್ವಾಮಿ ಗೆ ಕೈ ಮುಗಿಯುತ್ತಿತ್ತು ಎಂಬ ಪ್ರತೀತಿ ಇದೇ…. ಅಂದಿನಿಂದಲೂ ಸಹ ಈ ಬೆಟ್ಟದಲ್ಲಿ ಕರಡಿಗಳು ಇವೆಯಂತೆ. ಪ್ರತಿನಿತ್ಯ ನೂರಾರು ಜನ ಭಕ್ತರು ಈ ದೇವಾಲಯಕ್ಕೆ ಬರ್ತಾರೆ, ಈಗೇ ಬರುವ ಭಕ್ತರ ಮೇಲೆ ಕರಡಿಗಳು ಎಂದೂ ದಾಳಿ ಮಾಡಿಲ್ಲಾ.
ಬಸವರಾಜ್ , ಅರ್ಚಕರು.
ಇದು ಪ್ರಕೃತಿಯ ವಿಸ್ಮಯವೋ ಅಥವಾ ಪವಾಡವೋ ಗೊತ್ತಿಲ್ಲಾ ಮನುಷ್ಯನನ್ನು ಕಂಡರೆ ಆತನ ಮೇಲೆ ಎರಗಿ ಬೀಳುವ ಕರಡಿಗಳು ಇಲ್ಲಿ ಸಾಧುಸ್ವರೂಪದಲ್ಲಿವೆ…. ಏನೇ ಆಗಲೀ ರಂಗನಾಥನ ಸನ್ನಿಧಿಗೆ ಬರುವ ಭಕ್ತರು ಕರಡಿಗಳನ್ನು ಕಣ್ ತುಂಬಿಕೊಳ್ಳುತ್ತಿರೋದು ಮಾತ್ರ ಸತ್ಯ.
ಸಚಿನ್, ಭಕ್ತ

Leave a Comment