ಕೊಡೆಕೆರೆಯ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ

ಪಾಂಡವಪುರ: ಜು:12- ತಾಲೂಕಿನ ಚಿನಕುರಳಿ ಹಾಗೂ ಹೊನಗಾನಹಳ್ಳಿ ಗ್ರಾಮಗಳ ಕೃಷಿ ಪ್ರದೇಶಕ್ಕೆ ನೀರುಣಿಸುವ ಕೊಡೆಕೆರೆಯ ಅಭಿವೃದ್ದಿ ಕಾಮಗಾರಿಗೆ ಚಿನಕುರಳಿ ಜಿಪಂ ಸದಸ್ಯ ಸಿ.ಅಶೋಕ್ ಗುದ್ದಲಿ ಪೂಜೆನೆರವೇರಿಸಿದರು.
ನಂತರ ಮಾತನಾಡಿದ ಜಿಪಂ ಸದಸ್ಯ ಸಿ.ಅಶೋಕ್, ಹೇಮಾವತಿ ಇಲಾಖೆಯ ಯೋಜನೆಯಡಿ 28 ಲಕ್ಷ ರೂ.ವೆಚ್ಚದಲ್ಲಿ ಚಿನಕುರಳಿ-ಹೊನಗಾನಹಳ್ಳಿ ಗ್ರಾಮಗಳ ಮಧ್ಯ ಭಾಗದಲ್ಲಿರುವ ಕೊಡೆಕೆರೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆನೆರವೇರಿಸಿದ್ದೇವೆ. ಕೊಡೆಕೆರೆಯೂ ಸುಮಾರು 13 ಎಕರೆ ಪ್ರದೇಶವಿದ್ದು ಕೆರೆಯ ಸರ್ವೇನಡೆಸಿ ಕೆರೆ ಹೂಳು, ಏರಿ ಅಭಿವೃದ್ದಿ, ಬಾಕ್ಸ್ ಚರಂಡಿ ಹಾಗೂ ಸೋಪಾನ ಕಟ್ಟೆಯನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಕೊಡೆಕೆರೆಗೆ ಹೇಮಾವತಿ ನಾಲೆಯಿಂದ ನೀರು ತುಂಬಿಸಲಾಗುತ್ತದೆ, ಕೆರೆ ವ್ಯಾಪ್ತಿಯ ಸುಮಾರು 100 ಎಕರೆಕ್ಕೂ ಹೆಚ್ಚು ಕೃಷಿ ಪ್ರದೇಶಕ್ಕೆ ನೀರು ಪೂರೈಕೆ ಮಾಡುತ್ತದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.
ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪ್ರೇಮಮ್ಮ, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಸಿ.ಎ.ಲೋಕೇಶ್, ಸಿ.ಡಿ.ಮಹದೇವು, ಮುಖಂಡ ಬಲರಾಮು, ಕುಮಾರ್, ಜಯರಾಮು, ಎಇಗಳಾದ ರವಿ, ಕೃಷ್ಣ, ಗುತ್ತಿಗೆದಾರ ಜಗದೀಶ್ ಹಾಜರಿದ್ದರು.

Leave a Comment