ಕೊಡದೂರ ಗ್ರಾಮದಲ್ಲಿ ರೈತ ಆತ್ಮಹತ್ಯೆ

ಕಾಳಗಿ,ನ.17-ತಾಲೂಕಿನ ಕೊಡದೂರು ಗ್ರಾಮದ ರೈತ ಪಂಡಿತರಾವ  ಶರಣಪ್ಪ ಇಂಗನಕಲ್ (62) ಸಾಲ ಭಾದೆ ತಾಳದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶನಿವಾರ ಸಂಜೆ 6-30ಕ್ಕೆ ಈ ಘಟನೆ ನಡೆದಿದೆ.

ಮೃತ ರೈತನಿಗೆ 4 ಜನ ಹೆಣ್ಣು ಮಕ್ಕಳು, ಒಂದು ಗಂಡು ಮಗು, ಪತ್ನಿ ಇದ್ದಾರೆ. ಒಕ್ಕಲುತನವನ್ನೇ ಅವಲಂಬಿತರಾಗಿ ಜೀವನ ಸಾಗಿಸುತ್ತಿದ್ದ ಇವರು ಕೃಷಿ ಚಟುವಟಿಕೆಗಾಗಿ ರೈತ ಸೇವಾ ಸಹಕಾರ ಸಂಘಗಳು ಸೇರಿದಂತೆ ಮತ್ತಿತರ ಕಡೆ ಸಾಲ ಮಾಡಿದ್ದರು. ಸಾಲ ಮರು ಪಾವತಿಸುವುದು ಕಷ್ಟವಾದ ಕಾರಣ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.

ಸುದ್ದಿ ತಿಳಿದು ಕಾಳಗಿ ಪಿಎಸ್ಐ ಕಾಳಪ್ಪ ಬಡಿಗೇರ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ..

Leave a Comment