ಕೊಡಗು ಮಾದರಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿಯರಿಗೆ ಶಾಸಕದ್ವಯರ ಮನವಿ

ಮಂಗಳೂರು, ಆ.೧೪- ಕಾರ್ಪಣ್ಯಗಳಿಗೆ ಸ್ಪಂದಿಸುವಂತೆ ಹಾಗೂ ಅಂಶಿಕರಿಗೆ ಮನೆ ನಾಶವಾದವರಿಗೆ ೫ ಲಕ್ಷ ಅಥವಾ ೧ ಬೆಡ್‌ರೂಮ್ ಸಂಪೂರ್ಣ ೧ ಲಕ್ಷ ಅಥವಾ ೨ ಬೆಡ್‌ರೂಮ್ ಮನೆ ಜೊತೆಯಲ್ಲಿ ತುರ್ತು ಅಗತ್ಯಕ್ಕಾಗಿ ೫೦,೦೦೦ , ಬೆಳೆ ಹಾಗೂ ಕೃಷಿ ಹಾನಿಗೆ ಪ್ಯಾಕೇಜ್ ರೀತಿಯಲ್ಲಿ ಪರಿಹಾರ ಸ್ಥಳ ಕಳೆದುಕೊಂಡವರಿಗೆ ಸರಕಾರಿ ಜಾಗ ಒದಗಿಸುವ ಜೊತೆಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿಕೊಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸಾಂಕ್ರಾಮಿಕ ರೋಗಗಳು ಹರಡುವುದರಿಂದ ಈ ಬಗ್ಗೆ ವೈದ್ಯರ ತಂಡ ರಚಿಸಿ ಚಿಕಿತ್ಸೆ ನೀಡಬೇಕು ಹಾಗೂ ಕೇಂದ್ರ ಸರಕಾರದಿಂದ ಹೆಚ್ಚಿನ ಪರಿಹಾರಕ್ಕಾಗಿ ಮನವಿ ಮಾಡಬೇಕು ಎಂದು ಮನವಿಯಲ್ಲಿ ಸೂಚಿಸಲಾಯಿತು. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಪರಿಹಾರವನ್ನು ಒದಗಿಸಿಕೊಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ಸಂಧರ್ಭದಲ್ಲಿ ವಿದಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಹಾಗೂ ಕೆ ಹರೀಶ್ ಕುಮಾರ್ ಮನವಿ ಸಲ್ಲಿಸಿದರು.

Leave a Comment