ಕೊಡಗು ನೆರೆ ಸಂತ್ರಸ್ತರಿಗೆ ವೀರಶೈವ ಲಿಂಗಾಯತ ಯುವ ವೇದಿಕೆ ನೆರವು

ಬಳ್ಳಾರಿ, ಸೆ.5: ನಗರದ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಒಂದು ಲಕ್ಷದ ಒಂದು ಸಾವಿರ ಮೊತ್ತದ ಚೆಕ್ ನ್ನು ಕೊಡಗು ನೆರೆ ಸಂತ್ರಸ್ಥರಿಗೆ ಪರಿಹಾರವಾಗಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ಸಮಸ್ತ ಕಾರ್ಯಕರ್ತರು ಕೊಡಗು ಸಂತ್ರಸ್ಥರ ನೆರವಿಗೆ ಬರಬೇಕೆಂದು ವಿನಂತಿಸಲಾಯಿತು.ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಗೌರವಾಧ್ಯಕ್ಷ ಚಾನಾಳ್ ಶೇಖರ್, ಸಂಸ್ಥಾಪಕ ಅಧ್ಯಕ್ಷ ಅಂಗಡಿ ಶಂಕರ್ ಡಿ.ಕಗ್ಗಲ್, ಜಿಲ್ಲಾಧ್ಯಕ್ಷ ಮಂಜುನಾಥ ಬೆಳ್ಳಿಗಾರ್, ಉಪಾಧ್ಯಕ್ ತೋಟದ ವಿರೇಶ್, ಜೊತೆಗೆ ಗೆಳೆಯರ ಬಳಗದ ವಿರೇಶ್, ಕೃಷ್ಣ, ಸುದಿ, ಶಿವ, ಈಶ, ಪ್ರಭು, ಶೇಖರ್‍ರೆಡ್ಡಿ, ಅನಿಲ್, ಅಭಿಲಾಷ್, ಕೆ.ಎಂ.ಶಿವಕುಮಾರ್, ಕೋಳೂರು ಜಿ. ತಿಪ್ಪಾರೆಡ್ಡಿ, ವೀರಶೈವ ಮುಖಂಡರುಗಳಾದ ಕಂಚಿ ಬಸವರಾಜ, ನಾಡಗೌಡ ಚಂದ್ರಮೋಹನ್, ವಿಶ್ವನಾಥಸ್ವಾಮಿ, ಬೆಳ್ಡೋಣಿ ನಾಗರಾಜ, ಮಲ್ಲಿಕಾರ್ಜುನ ಚಾನಾಳ್, ವಿರೇಶ್, ಮಹಾಂತೇಶ್ ಮಸ್ಕಿ, ಸವಿನಂದನ್, ಗೋನಾಳು ರಘು, ಪ್ರಸನ್ನಕುಮಾರ್, ಹೇಮಂತ್, ಸವಿನಂದನ್, ಕಿರಣ್,ಅಭಿಷೇಕ್, ವಿನೋದ್, ವಿರೇಶ್, ಪ್ರಮೋದ್, ಇನ್ನಿತರ ವೀರಶೈವ ಮುಖಂಡರುಗಳು ಭಾಗವಹಿಸಿದ್ದರು.

Leave a Comment