ಕೊಡಗು ಕೇರಳ ನೆರೆ ಸಂತ್ರಸ್ಥರ ಸಂಕಷ್ಟ ಅವರು ಕೊಟ್ಟರೂ ಇವರು ಕಳಿಸಲಿಲ್ಲ

ಬಳ್ಳಾರಿ, ಸೆ.7: ಕಳೆದ ತಿಂಗಳಲ್ಲಿ ಬಿದ್ದ ಭಾರಿ ಮಳೆಯಿಂದಾದ ಪ್ರವಾಹ ಮತ್ತು ಭೂಕುಸಿತದಿಂದ ಕೇರಳ ಮತ್ತು ರಾಜ್ಯದ ಕೊಡಗು ಸಂತ್ರಸ್ಥರ ಸಂಕಷ್ಟಕ್ಕೆ ಮಿಡಿದ ಜಿಲ್ಲೆಯ ಜನರು ಪರಿಹಾರವಾಗಿ ಬಟ್ಟೆ, ವಿವಿಧ ಸಾಮಗ್ರಿ, ಹಣ ಮತ್ತಿತರೆಯನ್ನು ಸ್ವತಃ ತಾವು, ಸಾರ್ವಜನಿಕರಿಂದ ಸಂಗ್ರಹಿಸಿದ ವಿವಿಧ ಸಂಘ-ಸಂಸ್ಥೆಗಳು, ಜಿಲ್ಲಾಡಳಿತ ಮತ್ತು ರೆಡ್ ಕ್ರಾಸ್ ಸಂಸ್ಥೆಗೆ ನೀಡಿದರು. ಆದರೆ ಅವರು ಮಾತ್ರ ಈವರೆಗೆ ನೆರೆ ಸಂತ್ರಸ್ಥರಿಗೆ ಕಳಿಸಿದೆ. ಗೋದಾಮಿನಲ್ಲಿ ಇವೆ.

ಭೂಕಂಪ, ಪ್ರವಾಹ ಮೊದಲಾದ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸಾರ್ವಜನಿಕರು, ಸಂಘ-ಸಂಸ್ಥೆಗಳು, ತಕ್ಷಣ ಸ್ಪಂದಿಸಿ ಸಂಕಷ್ಟದಲ್ಲಿರುವವರ ನೆರವಿಗೆ ಅಗತ್ಯವಾದ ಪರಿಕರ, ಔಷಧಿ, ಆಹಾರ ಸಾಮಗ್ರಿ ಬಟ್ಟೆ, ನಗದು ಹಣವನ್ನು ಕೊಡುತ್ತಾರೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇಂತಹ ಪ್ರಕೃತಿ ವಿಕೋಪವನ್ನು ಸಂಭವಿಸಿದಾಗ ಸಹಕಾರಕ್ಕೆ ಬರುತ್ತೆ ತನ್ನ ಮೂಲಕ ಸಂತ್ರಸ್ಥರಿಗೆ ತಕ್ಷಣ ನೆರವಾಗಲೆಂದು ನಮ್ಮ ನಗರದಲ್ಲಿನ ರೆಡ್ ಕ್ರಾಸ್ ಸಂಸ್ಥೆ ಸಹ ಪತ್ರಿಕಾ ಹೇಳಿಕೆ ನೀಡಿ ನೆರೆಸಂತ್ರಸ್ಥರಿಗೆ ಪರಿಹಾರ ನೀಡುವವರು ನಮಗೆ ನೀಡಿ ನಾವು ಕಳಿಸುತ್ತೇವೆ ಎಂದಿದ್ದರು.

ನೆರವು ನೀಡುವವರೂ ಸಹ ಇವರ ಮನವಿಗೆ ಸ್ಪಂದಿಸಿ 7 ಲಕ್ಷ ರೂಪಾಯಿ ನಗದು, 2 ಬಾಕ್ಸ್ ಔಷಧಿ, ಬಿಸ್ಕೇಟ್ ಜ್ಯೂಸ್, ರಸ್ಕ್ ಇರುವ ತಲಾ ಒಂದು ಬಾಕ್ಸ್, 25 ಕ್ವಿಂಟಾಲ್ ಅಕ್ಕಿ ಹೊಸ ಮತ್ತು ಹಳೆಯ ಬಟ್ಟೆಗಳ ಅನೇಕ ಬಂಡಲ್ ಗಳನ್ನು ನೀಡಲಾಗಿದೆ. ಆದರೆ ಇವನ್ನು ಇವರೆಗೆ ನೆರೆ ಸಂತ್ರಸ್ಥರಿಗೆ ಕಳಿಸದೇ ಹಾಗೇ ಗೋದಾಮಿನಲ್ಲಿಡಲಾಗಿದೆ.

ಈ ವರೆಗೆ ಹಣವನ್ನು ಕಳಿಸದೇ ಇರುವ ಬಗ್ಗೆ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಷಕೀಬ್ ಅವರನ್ನು ಪ್ರಶ್ನಿಸಿದರೆ ಇನ್ನು ಜನತೆ ಸಾಮಗ್ರಿಗಳನ್ನು ತಂದು ಕೊಡುತ್ತಿದ್ದಾರೆ. ಸಂಸ್ಥೆ ಖರ್ಚಿನಲ್ಲಿ ಕಳಿಸಬೇಕಿದೆ. ಪದೇ ಪದೇ ಕಳಿಸಲು ವೆಚ್ಚ ಹೆಚ್ಚಾಗುತ್ತದೆಂದು ಕಳಿಸಿಲ್ಲ. ನಾಳೆಗೆ ವಸ್ತುಗಳನ್ನು ಸ್ವೀಕರಿಸಿರುವುದನ್ನು ಕೊನೆ ಮಾಡಿ ನಾಡಿದ್ದು ಕಳಿಸಿಕೊಡಲಿದೆಂದು ಷಕೀಬ್ ಅವರು ತಿಳಿಸಿದರು.

ಏನೇ ಆಗಲಿ ಪರಿಹಾರದ ಸಾಮಗ್ರಿಗಳನ್ನು ತಕ್ಷಣ ಎರಡು ಮೂರುದಿನದೊಳಗೆ ಕಳಿಸಿದರೆ ಸಂತ್ರಸ್ಥರಿಗೆ ಸಹಾಯ ಆಗುತ್ತಿತ್ತು ಎಂಬುದು ನೆರವು ನೀಡಿದವರ ಮಾತು.

Leave a Comment