ಕೊಟ್ಟ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸುವೆ:ವೆಂಕಟರಾವ್ ನಾಡಗೌಡ

ಬಳ್ಳಾರಿ, ಜೂ.12: ರಾಜ್ಯದ ಕುಮಾರಸ್ವಾಮಿ ಸಂಪುಟದಲ್ಲಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿರುವ ಸಿಂಧನೂರಿನ ಶಾಸಕ ವೆಂಕಟರಾವ್ ನಾಡಗೌಡ ಇಂದು ನಗರದ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮಗೆ ಕೊಟ್ಟಿರುವ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ. ನನಗೆ ದೊಡ್ಡ ಖಾತೆ, ಸಣ್ಣ ಖಾತೆ ಎಂಬ ಅಸಮಾಧಾನವಿಲ್ಲ ಎಂದರು.

ಸಿಂಧನೂರು ಕ್ಷೇತ್ರಕ್ಕೆ ಮೊದಲ ಬಾರಿಗೆ ಸಚಿವಸ್ಥಾನ ದೊರೆತಿದೆ. ಸಚಿವನಾಗಿ ಇಂದು ಮೊದಲ ಬಾರಿಗೆ ಕ್ಷೇತ್ರಕ್ಕೆ ತೆರಳುತ್ತಿರುವೆ. ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವೆ. ಈಗಾಗಲೇ ಒಮ್ಮೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಸಮಸ್ಯೆ ಪರಿಹಾರಗಳ ಬಗ್ಗೆ ಚರ್ಚೆ ನಡೆಸಿರುವೆ. ಇಂದು ದುರ್ಗಮ್ಮ ದೇವಿ ಆಶೀರ್ವಾದ ಪಡೆದು ಕ್ಷೇತ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

Leave a Comment