ಕೊಟ್ಟೊರೇಶ್ವರ ಸ್ವಾಮಿಯ ಕಾಮಪುರಾಣ ಬಯಲು

ಬೆಂಗಳೂರು, ಡಿ.೭-ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಲ್ಮಠದ ಕೊಟ್ಟೊರೇಶ್ವರ ಸ್ವಾಮಿಯ ಕಾಮಪುರಾಣ ಬಯಲಾಗಿದ್ದು ಸ್ವಾಮೀಜಿಯು ಹಲವು ಮಹಿಳೆಯರ ಜೊತೆ ಸಂಬಂಧ ಹೊಂದಿರುವ ಆರೋಪ ಕೇಳಿಬಂದಿದೆ.  ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಕೊಟ್ಟೂರು ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕಿಯರು, ಅಡುಗೆ ಮಾಡುವ ಮಹಿಳೆಯರು,ಗ್ರಂಥಪಾಲಕಿ ಹೀಗೆ ಹಲವು ಮಹಿಳೆಯರ ಜೊತೆ ಸ್ವಾಮೀಜಿ ಕಾಮದಾಟ ನಡೆಸಿರುವ ದೂರುಗಳಿವೆ.

ಇದಲ್ಲದೇ ವಸತಿಗೃಹವೊಂದರಲ್ಲಿ ಮಹಿಳೆಯೊಬ್ಬರ ಜೊತೆ ಕಾಮದಾಟ ನಡೆಸಿರುವ ದೃಶ್ಯಗಳು ಬಯಲಾಗಿದ್ದು ಸ್ವಾಮೀಜಿಯ ವಿರುದ್ದ ಮಠದ ಭಕ್ತರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀರಶೈವ ಸಂಪ್ರದಾಯದ ಕಲ್ಮಠದ ಈ ಕಾಮುಕ ಸ್ವಾಮೀಜಿಯು ಹೆಂಗಸರು ಮಾಡುವ ಅಡುಗೆ, ದುಬಾರಿ ಮದ್ಯ ಜೊತೆಗೆ ಮಾಂಸಹಾರವನ್ನು ಇಷ್ಟ ಪಡುತ್ತಾರೆ ಅಲ್ಲದೇ ಬ್ಯಾಂಕಾಕ್, ಥೈವಾನ್ ನಿಂದ ಮಠಕ್ಕೆ ಬರುವ ಮಹಿಳಾ ಭಕ್ತರ ಜೊತೆಯೂ ಸ್ವಾಮೀಜಿ ಸಂಬಂಧ ಹೊಂದಿದ್ದಾರೆ ಎನ್ನುವ ದೂರು ಕೇಳಿಬಂದಿದೆ.

ಶಿಕ್ಷಕಿ ಜೊತೆ ಸೆಕ್ಸ್
ಮೊದಲು ಕಲ್ಮಠದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮಹಿಳೆಯೊಬ್ಬರಿಗೆ ಕಲ್ಮಠದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದ ಸ್ವಾಮೀಜಿಯು ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಆಕೆ ವಿವಾಹವಾಗದಂತೆ ನೋಡಿಕೊಂಡು ಆಕೆ ನಿವೃತ್ತರಾಗಿ ವಯಸ್ಸಾಗುತ್ತಿದ್ದಂತೆ ಕೈಗಕೊಟ್ಟಿದ್ದು ನೊಂದ ಆಕೆ ಮಠ ತೊರೆದು ಗಂಗಾವತಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ

ಇನ್ನೂ ಹುಲಿಹೈದರ್ ಗ್ರಾಂದ ಮಹಿಳೆಯೊಬ್ಬರನ್ನು ಮಠದಲ್ಲಿ ತಂದಿಟ್ಟುಕೊಂಡು ಆಕೆಯ ಜೊತೆ ಸಂಬಂಧ ಬೆಳೆಸಿ ಆಕೆಯನ್ನು ಹುಲಿಹೈದರ್ ಗ್ರಾಮಪಂಚಾಯತ್ ಸದಸ್ಯೆಯಾಗಲು ನೆರವಾಗಿ ಗಂಗಾವತಿಯಲ್ಲಿ ೩೫ ಲಕ್ಷದ ಮನೆ ಕಟ್ಟಿಸಿಕೊಟ್ಟು ಸಿಸಿ ಕ್ಯಾಮೆರಾ,ಎಸಿ ಹಾಕಿಸಿ ಆಕೆಯ ಪತಿಗೆ ತಮ್ಮ ಕಾಲೇಜಿನಲ್ಲಿ ಸಿಪಾಯಿ ಕೆಲಸ ನೀಡಿ ಕಾಮದಾಟ ಮುಂದುವರೆಸಿದ್ದಾರೆ

ಅಮ್ಮ ಮಗಳು ಬೇಕು
ಗ್ರಾ.ಪಂ ಸದಸ್ಯೆಯಾಗಿದ್ದ ಮಹಿಳೆಯ ೧೨ನೇ ತರಗತಿ ಓದುತ್ತಿರುವ ಮಗಳ ಜೊತೆ ಕೂಡ ಸ್ವಾಮೀಜಿ ದೈಹಿಕ ಸಂಪರ್ಕ ಬೆಳೆಸಿದ್ದು ಆಕೆಗೆ ಗದಗದಲ್ಲಿ ಗರ್ಭಪಾತ ಮಾಡಿಸಿ ಈಗಲೂ ಆಕೆಯನ್ನು ಮಠದಲ್ಲಿಟ್ಟುಕೊಂಡಿದ್ದಾರೆ ಎನ್ನುವ ಆರೋಪ ಕೂಡ ಸ್ವಾಂಇಜಿಯ ವಿರುದ್ದ ಕೇಳಿಬಂದಿದೆ.

ಮಠದಲ್ಲಿ ಗ್ರಂಥಪಾಲಕಿಯಾಗಿದ್ದ ಮಹಿಳೆಯ ಜೊತೆ ಸಂಬಂಧವಿಟ್ಟುಕೊಂಡು ಆಕೆಗೆ ಎರಡು ಗಂಡು ಮಕ್ಕಳು ಕರುಣಿಸಿದ್ದು ಸ್ವಾಮಿಯ ಕಾಮದಾಟ ತಿಳಿದ ಮಹಿಳೆಯ ಪತಿ ಗಲಾಟೆ ತೆಗೆದಾಗ ೧೫ ಲಕ್ಷ ರೂ ನೀಡಿ ಜಗಳ ಬಗೆಹರಿಸಿಕೊಂಡಿದ್ದಾರೆ ಎನ್ನಲಾಗಿದೆ ಗ್ರಂಥಪಾಲಕಿಯ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಸ್ವಾಂಈಜಿ ಭರಿಸುತ್ತಿದ್ದು ಆ ಮಹಿಳೆಯು ಗದಗ ಜಿಲ್ಲೆಯಲ್ಲಿ ವಾಸವಾಗಿದ್ದಾರೆ.

ಕಲ್ಮಠದಲ್ಲಿರುವ ಮಹಿಳೆಯೊಬ್ಬರಲ್ಲದೇ ಬಾಗಲಕೋಟೆ ಜಿಲ್ಲೆಯ ಶಾಖಾಮಠದಲ್ಲಿರುವ ಅಡುಗೆ ಮಾಡುವ ಮಹಿಳೆಯೊಂದಿಗೆ ಬಲವಂತವಾಗಿ ಸ್ವಾಮೀಜಿಯು ಕಾಮತೃಷೆಗೆ ಬಳಸಿಕೊಂಡ ಆರೋಪವೂ ಇದೆ.

ಕೊಲೆ ಬೆದರಿಕೆ

ಪಿಸ್ತೂಲು ಪರವಾನಗಿ ಹೊಂದಿರುವ ಸ್ವಾಮಿಯು ತನಗೆ ಸಹಕರಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಿದ್ದು ಸುಮಾರು. ೨೦ ವರ್ಷಗಳಿಂದ ಕಾಮಿಸ್ವಾಮಿ ಕಾಮದಾಟಕ್ಕೆ ಪರೋಕ್ಷವಾಗಿ ಸಹಕರಿಸಿದ್ದ ಕಾರು ಚಾಲಕ ಇತ್ತೀಚಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆತನಿಗೆ ಸಂಬಳ ಕೊಡದೆ ಕೆಲಸದಿಂದ ತಗೆದು ಹಾಕಿದ್ದಾರೆ.

ಕಾಮಪುರಾಣ ಬಯಲು ಮಾಡಿದರೆ ಕೊಲೆ ಬೆದರಿಕೆ ಹಾಕಿ ಗುಂಡಾಗಳಿಂದ ಚಾಲಕ ಮೇಲೆ ಹಲ್ಲೆ ಮಾಡಿಸಿದ್ದಾನೆ. ಈಗ ಚಾಲಕ ಮಲ್ಲಯ್ಯಸ್ವಾಮಿ ಅಂಗಡಿ ಕುಟುಂಬ ಜೀವಭಯದಲ್ಲಿ ಊರು ಬಿಡುವ ಸ್ಥಿತಿಯಲ್ಲಿದ್ದಾರೆ.

ಸ್ವಾಮೀಜಿಯಿಂದ ಇಷ್ಟೆಲ್ಲಾ ಅನಾಚಾರ ನಡೆಯುತ್ತಿದ್ದರೂ ಟ್ರಸ್ಟ್ ನವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗಿದೆ ಆದರೂ ಸ್ವಾಮಿ ಮತ್ತೊಂದು ಟ್ರಸ್ಟ್ ಮಾಡಿಕೊಂಡು ಐಟಿಐ, ಡಿಇಡಿ, ಕಾಲೇಜು ನಡೆಸುತ್ತಿದ್ದು ಮಠದ ಆಸ್ತಿಯನ್ನ ತನ್ನ ಆಸ್ತಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪವೂ ಇದೆ.

ಕಲಠದ ೯ ನೇ ಪೀಠಾಧಿಪತಿಯಾಗಿರುವ ಕೊಟ್ಟೂರ ಸ್ವಾಮಿ ಕಾಮದಾಟಕ್ಕೆ ಬಲಿಯಾಗಿರುವ ಮಹಿಳೆಯರು ಅನಾಮಧೇಯ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

Leave a Comment