ಕೊಚ್ಚಿ ಕೊಲೆ ಪ್ರಕರಣ ಮುಂದಿನವಾರ ವಿಚಾರಣೆ

ನವದೆಹಲಿ, ಸೆ. ೧೦- ಅಲ್ವಾರ್ ಲಿಂಚಿಂಗ್ (ಕೊಚ್ಚಿ ಕೊಲೆ) ಪ್ರಕರಣದ ವಿಚಾರಣೆ ಕುರಿತಂತೆ ಮೃತನ ಕುಟುಂಬ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಂದಿನವಾರ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಹರಿಯಾಣ ಮೂಲದ ರಕ್ಬರ್ ಖಾನ್ ಅವರನ್ನು ಜುಲೈ 21 ರಂದು ಕೊಚ್ಚಿ ಕೊಲೆ ಮಾಡಲಾಗಿತ್ತು. ಇದರ ತನಿಖೆಯನ್ನು ಸುಪ್ರೀಂ ಕೋರ್ಟ್ ನಿಗಾದಲ್ಲಿ ನಡೆಸಬೇಕು ಎಂದು ಕೋರಿ, ಮೃತರ ಕುಟುಂಬ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಹಾಗೆಯೇ ಈ ಪ್ರಕರಣದ ವಿಚಾರಣೆಯನ್ನು ರಾಜಸ್ತಾನದಿಂದ ಹೊರಗೆ ಸ್ಥಳಾಂತರಿಸಲು ಮೃತರ ಕುಟುಂಬ ತಮ್ಮ ಸೆ. 7ರ ಮನವಿಯಲ್ಲಿ ನ್ಯಾಯಾಲಯವನ್ನು ಕೋರಿದೆ.
ರಕ್ಬರ್ ಖಾನ್ ಮತ್ತು ಆತನ ಗೆಳೆಯ ಅಸ್ಲಾಂ ಎರಡು ಹಸುಗಳನ್ನು ಕೊಲೊಗಾವ್ ಅರಣ್ಯದ ಮೂಲಕ ಸಾಗಿಸುತ್ತಿದ್ದಾಗ ಅಡ್ಡಗಟ್ಟಿದ ಗೋರಕ್ಷಕ ಪಡೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಈ ಹಲ್ಲೆಯಲ್ಲಿ ರಕ್ಬರ್ ಖಾನ್ ಮೃತಪಟ್ಟಿದ್ದರು. ಆತನ ಗೆಳೆಯ ಅಸ್ಲಾಂ ಅರಣ್ಯದಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದ.
ಈ ಪ್ರಕರಣದಲ್ಲಿ ಮೂರು ಮಂದಿ ಆರೋಪಿಗಳಾಗಿದ್ದಾರೆ.

Leave a Comment