ಕೊಗರೆ ಗ್ರಾಮದಲ್ಲಿ ಭೂಕಂಪನ

ಕೊಪ್ಪ, ಆ. ೨೭- ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಗರೆ ಗ್ರಾಮದಲ್ಲಿಂದು ಭೂಕಂಪನವಾದ ಅನುಭವವಾಗಿದೆ.
ಕಳೆದ 25ರಿಂದ 30 ದಿನಗಳಿಂದ ನಿರಂತರವಾಗಿ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ಒಳಭಾಗದಲ್ಲಿ ಸದ್ದಾಗುವ ಅನುಭವವಾಗುತ್ತಿತ್ತು. ಆದರೆ ಇಂದು ಸುಮಾರು 15 ಕಿಲೋ ಮೀಟರ್ ವ್ಯಾಪ್ತಿಗೆ ಭೂಕಂಪನವಾದ ಅನುಭವವಾಗಿದೆ.
ಗ್ರಾಮದ ಹಲವು ಮನೆಗಳ ಕಿಟಕಿಯ ಗಾಜುಗಳ ಒಡೆದಿದ್ದು, ಪಾತ್ರಪಗಡೆಗಳು ಬಿದ್ದಿದೆ. ಇದರಿಂದ ಗ್ರಾಮಸ್ಥರೆಲ್ಲರೂ ಆತಂಕಗೊಂಡಿದ್ದಾರೆ.
ಹಲವು ಗ್ರಾಮಸ್ಥರು ಬಾಳೆಹೊನ್ನೂರು ಸೇರಿದಂತೆ ಹಲವೆಡೆ ಸ್ಥಳಾಂತರಗೊಳ್ಳುತ್ತಿದ್ದು, ಸ್ವಯಂಪ್ರೇರಿತವಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ.
ಕಳೆದ 15 ವರ್ಷದಿಂದ ಇದೇ ಮೊದಲ ಬಾರಿ ಹೆಚ್ಚಿನ ಮಳೆಯಾಗಿದ್ದು, 42 ಸೆ.ಮೀ. ದಾಖಲೆಯಾಗಿದೆ. ಆದರೆ, ನಾಲ್ಕು ದಿನಗಳಿಂದ ಮಳೆ ಪ್ರಮಾಣ ಇಳಿಕೆಯಾಗಿದೆ.
ಕೆಲವು ದಿನಗಳ ಹಿಂದೆಷ್ಟೇ ಜಿಲ್ಲಾಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಇಂಜಿನಿಯರ್ ಹಾಗೂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಅವರ ಭೇಟಿ ನಂತರ ಯಾವುದೇ ಅಭಿವೃದ್ಧಿ ಕಾಣದೆ ಇದು ಕೇವಲ ನಾಮಕಾವಸ್ಥೆಯ ಪ್ರವಾಸವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Leave a Comment