‘ಕೈ’ ಆರೋಗ್ಯದ ಕೈಗನ್ನಡಿ

ಅನಾದಿ ಕಾಲದಿಂದಲೂ ನಮ್ಮ ಕೈಗಳು ನಮ್ಮ ಭವಿಷ್ಯದ ಕೈಗನ್ನಡಿ ಎಂಬ ನಂಬಿಕೆ ಇದೆ. ಏಕೆಂದರೆ ಆಗಿನ ರಾಜಮನೆತನದಿಂದ ಹಿಡಿದು ಇಂದಿನ ಸಾಮಾನ್ಯ ಜನರವರೆಗೂ ಕೈ ನೋಡಿ ಭವಿಷ್ಯ ಹೇಳುವ ಪದ್ಧತಿ ಜಾರಿಯಲ್ಲಿದೆ. ಅದು ನಿಜವೆಂಬ ನಂಬಿಕೆ ಕೂಡ ಇದೆ .ನಮ್ಮ ಕೈ ನಮ್ಮ ಭವಿಷ್ಯದ ಪ್ರತಿರೂಪ. ಕೈ ಬೆರಳ ತುದಿಯಿಂದ ನಮ್ಮ ಪೂರ್ತಿ ಅಂಗೈ ನಾವು ಭವಿಷ್ಯದಲ್ಲಿ ಹೇಗೆ ಬಾಳುತ್ತೇವೆ ಬದುಕುತ್ತೇವೆ , ನಮ್ಮ ಆಗು-ಹೋಗುಗಳು , ನಮ್ಮ ಸಂಪಾದನೆ, ನಮ್ಮ ನಷ್ಟ ಮತ್ತು ನಮ್ಮ ಆರೋಗ್ಯದ ಗುಟ್ಟನ್ನು ಹೇಳುತ್ತದೆ.

ಮನುಷ್ಯನಿಗೆ ಎಲ್ಲ ಭಾಗ್ಯಗಳಿಗಿಂತಲೂ ಆರೋಗ್ಯ ಭಾಗ್ಯ ಬಹಳ ಮುಖ್ಯ. ನಮ್ಮ ಜೀವನದ ಪ್ರತಿ ಹಂತದಲ್ಲೂ ಒಂದು ಮುಖ್ಯ ಪಾತ್ರ ವಹಿಸುವ ಯಾವುದಾದರೂ ಒಂದು ಅಂಶವಿದೆ ಅಂದರೆ ಅದು ನಮ್ಮ ಆರೋಗ್ಯ . ನಮ್ಮ ಆರೋಗ್ಯ ನಮ್ಮ ಕೈಯಲ್ಲಿ . ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಾವು ಕಟ್ಟುನಿಟ್ಟಾದ ಆಹಾರ ಪದ್ದತಿಗಳನ್ನು ಅನುಸರಿಸಬೇಕಾಗುತ್ತದೆ . ಆದರೂ ಕೆಲವೊಮ್ಮೆ ಎಡವುತ್ತೇವೆ . ಏಕೆಂದರೆ ದೈವ ನಿರ್ಣಯದ ಮುಂದೆ ನಮ್ಮ ಲೆಕ್ಕ ಎಷ್ಟರ ಮಟ್ಟಿಗೆ ಅಲ್ಲವೇ? ಸಂಶೋಧಕರ ಪ್ರಕಾರ ನಮಗೆ ಯಾವಾಗ ಏನಾಗುತ್ತದೆ , ಯಾವ ರೀತಿಯ ಕಾಯಿಲೆಗೆ ಯಾವ ಸಮಯದಲ್ಲಿ ತುತ್ತಾಗುತ್ತೇವೆ ಎಂಬುದನ್ನು ನಿಖರವಾಗಿ ನಮ್ಮ ಕೈಗಳು ಹೇಳುತ್ತವೆ ಎಂದರೆ ನೀವು ಖಂಡಿತವಾಗಿಯೂ ಆಶ್ಚರ್ಯಪಡುತ್ತೀರಿ.

health-hand

ಒಂದು ಉದಾಹರಣೆ ತೆಗೆದುಕೊಂಡು ಹೇಳಬೇಕೆಂದರೆ ಸಂಶೋಧಕರ ಪ್ರಕಾರ ಯಾರ ಕೈ ಬೆರಳುಗಳಲ್ಲಿ ಹೆಚ್ಚು ಸುರಳಿ ಆಕಾರವಿರುತ್ತದೆಯೋ ಅಂತಹವರು ಯಾರ ಕೈಬೆರಳುಗಳಲ್ಲಿ ಕಮಾನುಗಳು ಅಥವಾ ಕುಣಿಕೆಗಳ ರೀತಿಯ ಆಕಾರ ಹೊಂದಿರುತ್ತದೆಯೋ ಅಂಥವರಿಗೆ ಹೋಲಿಸಿದರೆ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುತ್ತಾರೆ.

ಅಷ್ಟೇ ಅಲ್ಲದೆ ಯಾವ ಮಹಿಳೆಯರು ತಮ್ಮ ಕೈಗಳಲ್ಲಿ ತೋರು ಬೆರಳಿಗೆ ಹೋಲಿಸಿದರೆ ಉದ್ದವಾದ ಉಂಗುರ ಬೆರಳನ್ನು ಹೊಂದಿರುತ್ತಾರೆಯೋ ಅಂಥವರು ಮೂಳೆಗೆ ಸಂಬಂಧಿತ ಸಂಧಿವಾತ ಕಾಯಿಲೆಗೆ ತುತ್ತಾಗುವ ಸಂಭವ ಎರಡರಷ್ಟಿರುತ್ತದೆ. ಅದೇ ಪುರುಷರಿಗೆ ತೋರು ಬೆರಳಿಗಿಂತ ಉದ್ದವಾದ ಉಂಗುರ ಬೆರಳಿದ್ದರೆ ತಮ್ಮ ಮಕ್ಕಳ ಜೊತೆ ಸುಖವಾದ ಆರೋಗ್ಯಕರ ಜೀವನ ನಡೆಸುತ್ತಾರೆಂಬ ಪ್ರತೀತಿ ಇದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಪುರುಷರಿಗೆ ಬಹಳ ಉದ್ದನೆಯ ಉಂಗುರ ಬೆರಳಿದ್ದರೆ ಕ್ಯಾನ್ಸರ್ ಕಾಯಿಲೆಗೆ ಬಲಿಯಾಗುವ ಸಂಭವ ಹೆಚ್ಚಿರುತ್ತದೆ ಎಂಬ ನಂಬಿಕೆ ಕೂಡ ಇದೆ.

ಕೈಗಳ ಹಿಡಿತ ನಾವು ಯಾವುದಾದರೂ ವಸ್ತುವನ್ನು ಎತ್ತಿಕೊಳ್ಳಬೇಕೆಂದರೆ ಮೊದಲು ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಇಲ್ಲದಿದ್ದರೆ ಅದು ಜಾರಿಕೊಳ್ಳುತ್ತದೆ ಮತ್ತು ಬಿದ್ದುಹೋಗುತ್ತದೆ ಅಲ್ಲವೇ? ಸಡಿಲವಾದ ಹಿಡಿತ ಹೊಂದಿರುವವರು ಹೃದಯಾಘಾತ ಮತ್ತು ಸ್ಟ್ರೋಕ್ ಕಾಯಿಲೆಗೆ ಗುರಿಯಾಗುತ್ತಾರೆ ಸಂಶೋದಕರು ಹೇಳುವಂತೆ ನಿಮ್ಮ ಕೈಗಳ ಹಿಡಿತ ನಿಮ್ಮ ದೇಹದ ಒಟ್ಟಾರೆ ಸಾಮರ್ಥ್ಯದ ಸ್ಪಷ್ಟವಾದ ಸೂಚನೆ.

ನಡುಗುವ ಕೈಗಳು ಕೆಲವರನ್ನು ಗಮನಿಸಿರುತ್ತೇವೆ. ಹೊರಗಡೆ ಬಿಸಿಲು ಜೋರಾಗಿದ್ದರೂ ನಮಗೆ ಶೆಕೆಯ ಅನುಭವವಾಗುತ್ತಿದ್ದರೂ, ಅವರ ಕೈಗಳು ಮಾತ್ರ ನಡುಗುತ್ತಿರುತ್ತವೆ. ಏನನ್ನೂ ಹಿಡಿದುಕೊಳ್ಳಲಾಗುವುದಿಲ್ಲ. ನೀರನ್ನೂ ಇನ್ನೊಬ್ಬರು ಕುಡಿಸಬೇಕು, ಊಟವನ್ನೂ ಇನ್ನೊಬ್ಬರು ಮಾಡಿಸಬೇಕು.ನಾವು ಅವರನ್ನು ನೋಡಿ ಇವರು ಚಳಿ ಬಂದಂತೆ ನಡುಗುತ್ತಿದ್ದಾರೆ ಅಂದುಕೊಳ್ಳುತ್ತೇವೆ. ಅಂತಹ ವ್ಯಕ್ತಿಗಳು ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿರುವುದು ಏನಪ್ಪಾ ಎಂದರೆ ಇದು ಹೃದಯ ಸಂಬಂಧಿತ ವಿಷಯ ಎಂದು. ಒಳಗಿನ ಹೃದಯದ ತೊಂದರೆ ಮೇಲೆ ಈ ರೀತಿ ತೋರ್ಪಡಿಸುತ್ತದೆ.

health-cold

ಆದ್ದರಿಂದ ತಡ ಮಾಡದೆ ತಕ್ಷಣ ವೈದ್ಯರನ್ನು ನೋಡುವುದು ಒಳ್ಳೆಯದು. ಇನ್ನೂ ಕೆಲವರಿಗೆ ಒಂದು ಕೈ ಮಾತ್ರ ನಡುಗುತ್ತಿರುತ್ತದೆ. ಇನ್ನೊಂದು ಕೈ ಚೆನ್ನಾಗಿಯೇ ಇರುತ್ತದೆ. ಅವರಿಗೆ ಇದು ಪಾರ್ಕಿನ್ಸನ್ ಕಾಯಿಲೆಯ ಆರಂಭಿಕ ಲಕ್ಷಣ ಎಂದರೆ ತಪ್ಪಾಗಲಿಕ್ಕಿಲ್ಲ. ಇಂತಹ ಸಂಧರ್ಭದಲ್ಲಿ ಕೂಡ ಇದನ್ನು ಹಗುರವಾಗಿ ತೆಗೆದುಕೊಳ್ಳದೆ ತಕ್ಷಣ ವೈದ್ಯರನ್ನು ನೋಡುವುದು ಒಳಿತು

ಉಗುರುಗಳಿಗೆ ಸಂಬಂಧಪಟ್ಟಂತೆ ನಿಮ್ಮನ್ನು ಆಶ್ಚರ್ಯಾಚಕಿತರಾಗುವಂತೆ ಮಾಡುವ ಇನ್ನೊಂದು ವಿಷಯ ಎಂದರೆ ನೀವು ಬಹಳ ವರ್ಷಗಳಿಂದ ಬಳಲುತ್ತಿರುವ ರಕ್ತಹೀನತೆ ಮತ್ತು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳನ್ನು ನಿಮ್ಮ ಬೆರಳುಗಳಲ್ಲಿರುವ ಉಗುರುಗಳು ತೋರಿಸುತ್ತವೆ.ಹೇಗೆಂದರೆ ನಿಮ್ಮ ಬೆರಳುಗಳಲ್ಲಿ ಅರ್ಧ ಉಗುರುಗಳಿದ್ದರೆ ಅಥವಾ ಉಗುರಿನ ತಳಭಾಗದಲ್ಲಿ ಉದ್ದನೆಯ ಪಟ್ಟೆ ಕಂಡುಬಂದರೆ ನೀವು ಒಂದು ರೀತಿಯಲ್ಲಿ ಸಂಕಷ್ಟಕ್ಕೀಡಾಗಿದ್ದೀರಿ ಎಂದೇ ಅರ್ಥ. ಈ ರೀತಿಯ ಲಕ್ಷಣಗಳು “ಮೆಲಾನೋಮ” ಎನ್ನುವ ಚರ್ಮ ಸಂಬಂಧಿತ ಕ್ಯಾನ್ಸರ್ ಕಾಯಿ ಲೆಯ ಲಕ್ಷಣ ಗಳೂ ಹೌದು. ಇಂತಹ ಸಂದರ್ಭ ದಲ್ಲಿ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದು ಸೂಕ್ತ.

Leave a Comment