ಕೈದಿಗಳ ಕೈಯಲ್ಲಿ ಅರಳಿದ ಕಲಾಕೃತಿಗಳು

ಧಾರವಾಡ,ಅ10 ಅವರೆಲ್ಲ ಯಾವುದೋ ಒಂದು ತಪ್ಪಲ್ಲಿ ಸಿಕ್ಕಿ ಜೈಲಲ್ಲಿ ಕಾಲ‌ ಕಳೆಯುತ್ತಿರೋ ಕೈದಿಗಳು. ಹತ್ತಾರು ವರ್ಷಗಳಿಂದ ಜೈಲಿನಲ್ಲಿಯೇ ದಿನ ದೂಡುತ್ತಿರೋರು.ಆದರೆ ಇವರಿಗೆ ಕಲೆ ಎಂಬುದು ಯಾರ ಸ್ವತ್ತು ಅಲ್ಲ ಎಂಬ ಮಾತಿನಂತೆ ಕೆಲವರು ಅಕ್ಷರಸ್ಥರಾದರೆ,ಇನ್ನೂ ಕೆಲವರು ಅನಕ್ಷರಸ್ಥರು ತಮ್ಮ ಕಲೆಯನ್ನು ಸಮಾಜಕ್ಕೆ ಗುರುತಿಸಿ ಮಾದರಿ ಆಗಿದ್ದಾರೆ.
ಹೌದು! ಕಲೆಗೆ ಯಾರು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬಂತೆ ಧಾರವಾಡ ಕೇಂದ್ರ ಕಾರಾಗೃಹದ ಕೈದಿಗಳಿಗೆ ದಸರಾ ಹಬ್ಬದ ಪ್ರಯುಕ್ತ ಸ್ತಬ್ಧ ಚಿತ್ರಗಳ ಪ್ರದರ್ಶನವನ್ನು ಧಾರವಾಡ ಕೇಂದ್ರ ಕಾರಾಗೃಹದ ಹೊರ ಭಾಗದಲ್ಲಿರುವ ಕರೆಯಮ್ಮದೇವಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿತ್ತು,

ಸುಮಾರು 20 ಜನ ಸಜಾ ಕೈದಿಗಳಿಂದ ಸುಮಾರು 2 3 ತಿಂಗಳಿಂದ  ಯಾವುದೇ ತರಬೇತಿ ಪಡೆಯದೆ ಕೇವಲ ಒಂದು ಫೋಟೋ ಮೂಖಾಂತರ ಶಬರಿಮಲೆ ಅಯ್ಯಪ್ಪ ದೇವಸ್ಥಾನ,  ಕುಂಚಿಗೆ, ಕುಲಾಯಿ,ಬೆತ್ಲಹೆಮ್ ಚರ್ಚ್, ಜೋಡೆತ್ತಿನ ಬಂಡಿ,ಸ್ವೇಟರ್‌, ಕೀ ಚೈನ್, ಸ್ನೇಹದ ಬ್ಯಾಂಡ್, ಬಟ್ಟೆ ಚೀಲ, ಕಟ್ಟಿಗೆ ಚಮಚ, ಚಿಪ್ಪಿನ ಕಪ್‌ಗಳು, ಡೈನ್ನಿಂಗ್‌ ಟೇಬಲ್
ಮಹಿಳೆಯರ ಅಲಂಕಾರಿಕ ವಸ್ತುಗಳಾದ ಕಿವಿ ಓಲೆ, ಸರ, ಉಲನ್ನ್ನಿಂದ ತಯಾರಿಸಿದ ಬಟ್ಟೆಗಳು ಸೇರಿದಂತೆ ನಾನಾ ರೀತಿಯ ಉಪಯುಕ್ತ ವಸ್ತುಗಳ ತಮ್ಮ ಕಲಾಕೃತಿಗಳ ಮೂಲಕ ತಯಾರಿಸಿದ್ದಾರೆ.ಇನ್ನೂ ಬೆಂಡು, ಪೇಪರ್, ರಟ್ಟು ಮತ್ತು ‌ಇನ್ನಿತರೆ ಕಚ್ಚಾ ವಸ್ತುಗಳನ್ನ ಬಳಸಿಕೊಂಡು ಮೈಸೂರು ಅರಮನೆ ಯಥಾವತ್ತಾಗಿ ನಿರ್ಮಿಸಿರುವ ವಸ್ತುಗಳ ದೃಶ್ಯ ಎಲ್ಲರಿಗೂ ಗಮನಸೆಳೆಯಿತು,
ಇನ್ನೂ ಕೈದಿಗಳು ತಯಾರಿಸಿದ ವಸ್ತುಗಳಿಗೆ ಜೈಲಾಧಿಕಾರಿ ಮಾರುಕಟ್ಟೆಯನ್ನೂ ಒದಗಿಸಿ ಕಾರಾಗೃಹದ ಹೊರಭಾಗದಲ್ಲಿ ಇವುಗಳ ಪ್ರದರ್ಶನದ ಜೊತೆಗೆ ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಹೀಗೆ ಸೃಜನಶೀಲ ಕಾರ್ಯ ಚಟುವಟಿಕೆಗಳಲ್ಲಿ ಜೈಲಿನಲ್ಲಿರುವ ಖೈದಿಗಳು ಭಾಗವಹಿಸುವುದರಿಂದ ಮನ ಪರಿವರ್ತನೆಗೆ ಸಹಾಯಕವಾಗುತ್ತದೆ. ಈ ಮೂಲಕ ಅವರಿಂದ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಸಾಧ್ಯವಾಗುತ್ತದೆ ಎನ್ನುತ್ತಾರೆ ಜೈಲು ಅಧಿಕಾರಿ ಡಾ.ಅನಿತಾ ಆರ್.
ಖೈದಿಗಳಿಗೆ ಅವರ ಆಸಕ್ತಿ, ಕಲೆಗಳನ್ನು ಪ್ರದರ್ಶಿಸಲು ಮುಕ್ತ ಅವಕಾಶ ನೀಡಿ, ವಸ್ತುಗಳನ್ನು ತಯಾರಿಸಲು ಅವರಿಗೆ ಅಗತ್ಯವಿರುವ ಪರಿಕರಗಳನ್ನು ನೀಡಿ ಅವರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಅವುಗಳನ್ನು ಪ್ರದರ್ಶನಕ್ಕೆ ವೇದಿಕೆ ಒದಗಿಸಿದಲ್ಲದೇ ಅವುಗಳ ಮಾರಾಟ ಮಾಡುವ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸೋ ಕ್ರಮಕ್ಕೆ ಮುಂದಾಗಿರೋದು ಪ್ರಶಂಸನೀಯ ಕೆಲಸವಾಗಿದೆ.

Leave a Comment