ಕೈಗೆ ಸಿಗದ ಸಚಿವ ಮಹೇಶ್

ಬೆಂಗಳೂರು, ಅ. ೧೨- ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸ್ಥಾನಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ರಾಜೀನಾಮೆ ನೀಡಿರುವುದು ನಾನಾ ವಾಖ್ಯಾನಗಳಿಗೆ ಕಾರಣವಾಗಿದೆ.

ಈ ನಡುವೆ ಮಹೇಶ್ ಅವರು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಾಸ್ ಪಡೆಯುವಂತೆ ಅವರ ಮನವೊಲಿಕೆಗೆ ಮಾಡಿರುವ ಪ್ರಯತ್ನಗಳು ಸಾಗಿವೆ. ಆದರೆ ಮಹೇಶ್ ಯಾರ ಕೈಗೂ ಸಿಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮಹೇಶ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮಹೇಶ್ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರದು ಬೇರೆ ಪಕ್ಷ, ನಮ್ಮದು ಬೇರೆ ಪಕ್ಷ. ಅವರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು ಹೇಳಿದರು.

ಮಹೇಶ್ ರಾಜೀನಾಮೆಗೆ ಬಿಎಸ್‌ಪಿ ಕೇಂದ್ರ ಮಟ್ಟದಲ್ಲಿ ರಚಿಸಿರುವ ಮಹಾಘಟ ಬಂಧನ್‌ನಿಂದ ಹೊರಬಂದಿರುವುದೇ ಕಾರಣ ಎನ್ನಲಾಗಿದೆ.

ವಿಶ್ವಾಸ   

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ತಮ್ಮ ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಾಸ್ ಪಡೆದು ಮತ್ತೆ ಸಂಪುಟ ಸೇರಲಿದ್ದಾರೆ ಎನ್ನುವ ವಿಶ್ವಾಸವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಮಹೇಶ್ ಅವರಿಗೆ ಬಹುದೊಡ್ಡ ಖಾತೆಯನ್ನು ನೀಡಿದ್ದು, ಅವರು ಮತ್ತೆ ಸಚಿವ ಸಂಪುಟದಲ್ಲಿ ಸೇರಲಿದ್ದಾರೆ ಎಂದು ಹೇಳಿದರು.

Leave a Comment