ಕೈಗಾರಿಕೋದ್ಯಮ ಸ್ಥಾಪನೆ : ಹೂಡಿಕೆದಾರರಿಗೆ ಆಹ್ವಾನ

ರಾಯಚೂರು.ಸೆ.12- ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕೋದ್ಯಮ ಸ್ಥಾಪಿಸಲು ಬಂಡವಾಳ ಹೂಡಿಕೆದಾರರನ್ನು ಆಹ್ವಾನಿಸಲಾಗಿದೆಂದು ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಇತ್ತೀಚಿಗೆ ಅಮೇರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮಱ್ಸ್ ವತಿಯಿಂದ ಟೆಕ್ಸಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಬಂಡವಾಳ ಹೂಡಿಕೆದಾರರನ್ನು ಆಹ್ವಾನಿಸಲಾಗಿದ್ದು, ಕೈಗಾರಿಕೆ ಸ್ಥಾಪಿಸಲು ಹೈ-ಕ ಪ್ರದೇಶ ಉತ್ತಮವಾಗಿದ್ದು. ತಾವೊಮ್ಮೆ ಭೇಟಿ ನೀಡಿ ಸ್ಥಳ ಪರಿಶೀಲಿಸಬೇಕೆಂದು ತಿಳಿಸಿದ್ದಾರೆ.
ಕೈಗಾರಿಕೆ ಸ್ಥಾಪನೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಕಲ್ಪಿಸುವುದಾಗಿ ತಿಳಿಸಿದರು. ಪೆಟ್ರೋಲ್ ಮತ್ತು ಡೀಸೆಲ್‌ ಜಿಎಸ್‌ಟಿ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಆಯಾ ರಾಜ್ಯ ಸರ್ಕಾರ ಸಹಕರಿಸಬೇಕು. ಯಾವುದೇ ಒಂದು ರಾಜ್ಯ ಸರ್ಕಾರವೂ ಈ ಕುರಿತು ವಿರೋಧಿಸಿದರೆ, ಜಿಎಸ್‌ಟಿಗೊಳಪಡುವುದಿಲ್ಲ.
ಹರವಿ ನಾಗನಗೌಡ ಮಾತನಾಡಿ, ಇದುವರೆಗೆ ಮಾನ್ವಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ನೀರಾವರಿ ಸೌಲಭ್ಯವಿಲ್ಲದ ಕಾರಣ ಪ್ರತಿ ವರ್ಷ ರೈತರು, ಬೆಳೆ ಬೆಳೆಯಲು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಬೆಳೆ ಬೆಳೆಯಲು ನೀರು ಒದಗಿಸುತ್ತಿಲ್ಲ. ಗಂಗಾವತಿ ಹಾಗೂ ಕಾರಟಗಿ ಪ್ರದೇಶದಲ್ಲಿ ರೈತರು 1 ಎಕರೆ ಬೆಳೆದಲ್ಲಿ ಭತ್ತ ಬೆಳೆದರೆ, ನೀರಾವರಿ ಅಧಿಕಾರಿಗಳು 4 ಚೀಲ ಭತ್ತ ಪಡೆಯುತ್ತಾರೆಂದು ಆರೋಪಿಸಿದರು. ಇಂತಹ ಅಧಿಕಾರಿಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಗದೀಶ್ ಗುಪ್ತ, ಕಾರ್ಯದರ್ಶಿ ಜಂಬಣ್ಣ , ಲಕ್ಷ್ಮೀರೆ‌ಡಿ ಉಪಸ್ಥಿತರಿದ್ದರು.

Leave a Comment