ಕೇರಳ ಸಂತ್ರಸ್ತರಿಗೆ ಕಲಾವಿದರ ನೆರವು

ಬೆಂಗಳೂರು, ಆ.೧೬- ಶತಮಾನ ಕಂಡ ಭಯಂಕರ ಮಳೆಗ ಕೇರಳ ರಾಜ್ಯ ನಲುಗಿ ಹೋಗಿದ್ದು, ಸಂಕಷ್ಟದಲ್ಲಿರುವ ಅಲ್ಲಿನ ಜನತೆಯ ನೆರವಿಗೆ ಚಲನಚಿತ್ರ ನಟರು ಸೇರಿದಂತೆ ಹಲವಾರು ಮಂದಿ ಮುಂದೆ ಬಂದಿದ್ದಾರೆ.
ಕಳೆದ ಕೆಲ ದಿನಗಳಿಂದ ಜಲ ಪ್ರವಾಹಕ್ಕೆ ಸಿಲುಕಿರುವ ಅಲ್ಲಿನ ಜನರಿಗೆ ಪುನರ್ ವಸತಿ ಕಲ್ಪಿಸಲು ರಾಜ್ಯ, ಭಾಷೆ, ಎಂಬುದನ್ನು ಮರೆತು ಸಹಾಯ ಹಸ್ತ ಚಾಚುತ್ತಿದ್ದಾರೆ. ಅದರಲ್ಲೂ ಸಿನಿಮಾ ಕಲಾವಿದರು ಹಿಂದೆ ಬಿದ್ದಿಲ್ಲ.
ತೆಲುಗು ನಾಯಕ ನಟ ಪ್ರಭಾಸ್, ಕೇರಳಿಗರ ನೆರವಿಗೆ ಧಾವಿಸಿದ್ದು, 1 ಕೋಟಿ ರೂ ಗಳನ್ನು ಕೇರಳ ಸರ್ಕಾರಕ್ಕೆ ನೀಡಿದ್ದಾರೆ. ಹಿರಿಯ ನಟ ಕಮಲ್ ಹಾಸನ್ 25 ಲಕ್ಷ, ಅಲ್ಲು ಅರ್ಜುನ್ 25 ಲಕ್ಷ, ವಿಜಯ್ ದೇವರಕೊಂಡ 5 ಲಕ್ಷ, ನಟ ಸೂರ್ಯ 25 ಲಕ್ಷ, ಕೀರ್ತಿ ಸುರೇಶ್ 5 ಲಕ್ಷ, ಅನು ಪರಮೇಶ್ವರನ್ 1 ಲಕ್ಷ ನೀಡಿದ್ದಾರೆ.
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ 5 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದಾರೆ.
ವರುಣನ ಮಿತಿ ಮೀರಿದ ಅಬ್ಬರದಿಂದ ಪ್ರವಾಹ ಉಂಟಾಗಿದ್ದು, ಸುಮಾರು 79 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕುಟುಂಬಗಳು ಅತಂತ್ರವಾಗಿದೆ. ಈ ಕರುಣಾ ಜನಕ ಸ್ಥಿತಿಗೆ ಕಲಾವಿದರ ಹೃದಯ ಮಿಡಿದಿದೆ.

Leave a Comment