ಕೇರಳ ಪ್ರವಾಸೋದ್ಯಮ ಇಲಾಖೆ ‘ಬೀಫ್’ ಟ್ವೀಟ್ ಗೆ ವಿಎಚ್ ಪಿ ಆಕ್ಷೇಪ

ತಿರುವನಂತಪುರಂ, ಜ 17 –  ಕೇರಳ ಪ್ರವಾಸೋದ್ಯಮ ಇಲಾಖೆ ‘ಬೀಫ್’ ಟ್ವೀಟ್ ಹಿಂದೂ ಜನರ ಭಾವನೆಗೆ ಧಕ್ಕೆ ತಂದಿದೆ ಎಂದು ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ವಿಎಚ್ ಪಿ ವಕ್ತಾರ ವಿನೋದ್ ಬನ್ಸಾಲ್, “ಈ ಟ್ವೀಟ್ ಪ್ರವಾಸೋದ್ಯಮಕ್ಕೆ ಪ್ರಚಾರ ನೀಡುತ್ತಿದೆಯೋ, ಹಂದಿ ಮಾಂಸಕ್ಕೋ? ಇದು ಗೋವನ್ನು ಪೂಜಿಸುವ ಕೋಟ್ಯಂತರ ಜನರ ಭಾವನೆಗೆ ಧಕ್ಕೆ ತರುವುದಿಲ್ಲವೇ? ಶಂಕರಾಚಾರ್ಯರ ಪವಿತ್ರ ನಾಡಿನಲ್ಲಿ ಇಂತಹ ಟ್ವೀಟ್ ಗಳು ಹೊರಬರುತ್ತವೆಯೇ?” ಎಂದಿದ್ದಾರೆ.

ಜನರ ಭಾವನೆಗಳಿಗೆ ಧಕ್ಕೆ ತಂದು ಯಾವುದನ್ನೂ ಪ್ರಚಾರ ಮಾಡಬಾರದು ಎಂಬುದನ್ನುಕೇರಳ ಪ್ರವಾಸೋದ್ಯಮ ಅರಿಯಬೇಕು. ಎಡಪಂಥೀಯರೇಕೆ ಪದೇ ಪದೆ ಹಿಂದೂ ಜನರನ್ನು ಕೆಣಕುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಟ್ವೀಟ್ ನಲ್ಲಿ ಅವರು ಕೇರಳ ರಾಜ್ಯಪಾಲರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಮತ್ತು ಪ್ರವಾಸೋದ್ಯಮ ಸಚಿವರ ಖಾತೆಗಳನ್ನು ಟ್ಯಾಗ್ ಮಾಡಿದ್ದು, ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಮಕರ ಸಂಕ್ರಾಂತಿ ಸಂದರ್ಭದಲ್ಲಿ  ಕೇರಳ ಪ್ರವಾಸೋದ್ಯಮ ಇಲಾಖೆ “ಹಂದಿಯ ಮಾಂಸದ ಚೂರುಗಳು, ಪರಿಮಳಯುಕ್ತ ಮಸಾಲೆಗಳು, ತೆಂಗಿನ ಚೂರುಗಳು ಮತ್ತು ಸಾಂಬಾರು ಎಲೆಗಳಿದ್ದಲ್ಲಿ ಅತ್ಯುತ್ತಮ ಬೀಫ್ ಉಲರ್ತಿಯತು ಎಂಬ ಸ್ವಾದಿಷ್ಟ ತಿನಿಸು ತಯಾರಿಸಬಹುದು-ಇದು ಮಸಾಲೆಗಳ ನಾಡು ಕೇರಳದಲ್ಲಿ ಲಭ್ಯ” ಎಂದು ಟ್ವೀಟ್ ಮಾಡಿತ್ತು.

Leave a Comment