ಕೇರಳ ಪುನರ್ ನಿರ್ಮಾಣಕ್ಕೆ ಯುಎಇ 700 ಕೋಟಿ ರೂ. ನೆರವು

ನವದೆಹಲಿ, ಆ. ೨೧- ವರುಣನ ಅಬ್ಬರದಿಂದ ಪ್ರವಾಹ ಉಂಟಾಗಿ ಹಾನಿಗೊಳಗಾದ ದೇವರನಾಡು ಕೇರಳದ ಪುನರ್ ನಿರ್ಮಾಣಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್-ಯುಎಇ 700 ಕೋಟಿ ರೂ.ಗಳ ನೆರವು ಪ್ರಕಟಿಸಿದೆ.

ಅಬುದಾಬಿಯ ರಾಜ ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ 100 ಮಿಲಿಯನ್ ಡಾಲರ್ (700 ಕೋಟಿ) ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ.

ಅಪಾರ ಪ್ರಮಾಣದಲ್ಲಿ ನೆರವಿನ ಹಸ್ತೆ ಚಾಚಿರುವ ಯುಎಇ ರಾಜ ಮತ್ತು ಅಲ್ಲಿನ ಸರ್ಕಾರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೃತಜ್ಞತೆ ಸಲ್ಲಿಸಿದ್ದಾರೆ.

ಕೇರಳದ ಜನ ಸಂಕಷ್ಟದಲ್ಲಿರುವನ್ನು ಮನಗಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿರುವ ನೆರವಿಗೆ ಕೃತಜ್ಞತೆ ಸಲ್ಲಿಸಲು ಪದಗಳೇ ಸಾಲುತ್ತಿಲ್ಲ. ಕಷ್ಟಕಾಲದಲ್ಲಿ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ ಹೇಳುವುದನ್ನು ಹೊರತುಪಡಿಸಿ ಬೇರೇನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಪಾರ ಪ್ರಮಾಣದಲ್ಲಿ ನೆರವು ನೀಡಿದ ಅಬುದಾಬಿ ರಾಜ ಹಾಗೂ ಸಹಕಾರ ನೀಡಿದ ಪ್ರಧಾನಿ ನರೇಂದ್ರಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಕೊಡಗಿನಲ್ಲಿ ಹೊಸದಾಗಿ ಮನೆ-ಮಠ ಸೇರಿದಂತೆ ಎಲ್ಲವನ್ನೂ ಪುನರ್ ನಿರ್ಮಾಣ ಮಾಡಬೇಕಾಗಿದೆ. ಅಪಾಯಕ್ಕೆ ಸಿಲುಕಿರುವ ಕೇರಳದಲ್ಲಿ ಸಾಂಕ್ರಾಮಿಕ ರೋಗಗಳು ಎದುರಾಗುತ್ತಿದ್ದು, ಅವುಗಳ ತಡೆಗೆ ಸಮಾರೋಪಾದಿಯಾಗಿ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ವಪಕ್ಷಗಳ ಸಭೆ ಕರೆದಿದ್ದು, ತಿಂಗಳಾಂತ್ಯದಲ್ಲಿ ವಿಶೇಷ ಅಧಿವೇಶನ ನಡೆಸುವ ಸಾಧ್ಯತೆ ಇದೆ.

Leave a Comment