ಕೇರಳ ಕೇರಳ ಡೋಂಟ್ ವರಿ ಕೇರಳಾ ಎಂದ ರೆಹಮಾನ್

 

ಸಕ್ರಮೆಂಟೊ(ಕ್ಯಾಲಿಫೋರ್ನಿಯಾ),ಆ.೨೨- ನೆರೆಯಿಂದ ಜೀವ-ಜೀವನವನ್ನೇ ಕಳೆದುಕೊಂಡ ಕೇರಳ ಜನತೆಗೆ ದೇಶದ ಸಿನಿಮಾರಂಗದಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ.
ಇದೇ ವೇಳೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ವಿಭಿನ್ನವಾಗಿ ತಮ್ಮ ನೆರವು ನೀಡಿದ್ದಾರೆ. ಕೇರಳ ಜನರ ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಕೇರಳದ ಪರಿಸ್ಥಿತಿಯನ್ನು ಹೊರ ಜಗತ್ತಿಗೆ ತಿಳಿಸಲು ತೆಲುಗು ಸಿನಿಮಾದ ಪ್ರಮುಖ ಹಾಡಿನ ಸಾಹಿತ್ಯವನ್ನು ಬದಲಿಸಿ ಹಾಡಿದ್ದಾರೆ.
ಕಾದಲ್ ದೇಸಮ್ ಚಿತ್ರದ ಮುಸ್ತಫಾ ಮುಸ್ತಫಾ ಹಾಡನ್ನು ಕೇರಳ, ಕೇರಳ ಡೋಂಟ್ ವರಿ ಕೇರಳಾ ಎಂದು ವಿದೇಶದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಹಾಡಿ
ರೆಹಮಾನ್ ಗಮನ ಸೆಳೆದಿದ್ದಾರೆ.
ಆಗಸ್ಟ್ ೧೯ರಂದು ಕ್ಯಾಲಿಫೋರ್ನಿಯಾದ ಅನಾಹೈಮ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ರೀತಿ ಸಾಹಿತ್ಯ ಬದಲಿಸಿ ಹಾಡಿದ್ದಾರೆ. ಕಾರ್ಯಕ್ರಮದಲ್ಲಿ ಇದ್ದ ಕೇರಳ ಮೂಲದವರನ್ನು ಸೆಳೆಯುವ ಜತೆಗೆ ಕೇರಳದ ಬಗ್ಗೆ ತಮ್ಮ ಭಾವನೆಯನ್ನು ಹಾಡಿನ ಮೂಲಕ ವ್ಯಕ್ತಪಡಿಸಿದರು.
ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರನ್ನು ಮುಟ್ಟಿದೆ. ಪ್ರತಿಭಾನ್ವಿತ ಕಲಾವಿದರಿದ್ದ ವೇದಿಕೆಯಲ್ಲಿ ಪ್ರಸ್ತುತಪಡಿಸಿದ ಕೇರಳ ಕೇರಳ ಸಾಹಿತ್ಯ ಪ್ರೇಕ್ಷಕರನ್ನು ಸೆಳೆಯಿತಲ್ಲದೇ, ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

Leave a Comment