ಕೇರಳ- ಕರ್ನಾಟಕ ಗಡಿಭಾಗದ ರಸ್ತೆಗಳಿಗೆ ಮಣ್ಣುಹಾಕಿರಸ್ತೆ ಸಂಚಾರ ತಡೆ

ಮಂಗಳೂರು, ಮಾ.೨೬- ಕೊಣಾಜೆ ಸಮೀಪದಲ್ಲಿ ಕೇರಳಕ್ಕೆ ಬರುವ ಅನೇಕ ಒಳದಾರಿಗಳಿದ್ದು, ಅಲ್ಲಿ ಪೊಲೀಸರಿದ್ದರೂ ಕಣ್ತಪ್ಪಿಸಿ ವಾಹನಗಳು ನಿರಂತರವಾಗಿ ಬರುವ ಹಿನ್ನೆಲೆಯಲ್ಲಿ ಬುಧವಾರ ಗ್ರಾಮಸ್ಥರು ಹಾಗೂ ಪೊಲೀಸರು ತುರ್ತು ಕ್ರಮಕೈಗೊಂಡು, ಜೆಸಿಬಿ ಮೂಲಕ ರಸ್ತೆಗೆ ಮಣ್ಣು ಹಾಕಿ ಮೂರು ಒಳರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಗಡಿಭಾಗ ತಲಪಾಡಿ ಸೇರಿದಂತೆ ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯ ಪೊಲೀಸರು ಒಳರಸ್ತೆಗಳಲ್ಲಿ ಕಾವಲು ಕಾಯುತ್ತಾ, ಕೇರಳದ ವಾಹನಗಳನ್ನು ಕರ್ನಾಟಕ ಪ್ರವೇಶಿಸದಂತೆ ತಡೆಯೊಡ್ಡುತ್ತಿದ್ದಾರೆ.

Leave a Comment