ಕೇರಳಕ್ಕೆ ೫೧ ಲಕ್ಷ ನೆರವು ನೀಡಿದ ಅಮಿತಾಬ್

ಮುಂಬೈ,ಆ.೨೩- ನೆರೆ ಸಂತ್ರಸ್ತರಿಗೆ ಸಿನಿಮಾರಂಗದಿಂದ ಮಹಾಪೂರವೇ ಹರಿದುಬರುತ್ತಿರುವ ಬೆನ್ನಲ್ಲೇ ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ೫೧ ಲಕ್ಷ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

೫೧ ಲಕ್ಷ ಅಲ್ಲದೇ ತಮ್ಮ ವೈಯಕ್ತಿಕ ಬೆಲೆಬಾಳುವ ವಸ್ತುಗಳನ್ನು ಸಹ ನೆರವಿಗಾಗಿ ನೀಡಿದ್ದಾರೆ. ಆರು ಕರ್ಟನ್ಸ್, ೮೦ ಜಾಕೆಟ್‌ಗಳು, ೨೫ ಪ್ಯಾಂಟ್‌ಗಳು, ೨೦ ಶರ್ಟ್ಸ್, ಸ್ಕಾಫ್ಸ್ ಮತ್ತು ೪೦ ಶೂಗಳನ್ನು ನೀಡಿ ತಮ್ಮ ಉದಾರತೆ ತೋರಿದ್ದಾರೆ.

ಇತ್ತೀಚೆಗಷ್ಟೇ ಸುಶಾಂತ್ ಸಿಂಗ್ ರಜಪೂತ್ ಒಂದು ಕೋಟಿ, ಶಾರುಖ್ ಖಾನ್ ೨೧ ಲಕ್ಷ, ಜಾಕ್ವೆಲಿನ್ ಫರ್ನಾಂಡಿಸ್ ೫ ಲಕ್ಷ, ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಬಾಲಿವುಡ್ ನಟರು ನೂರಾರು ಲಕ್ಷ ನೆರವು ನೀಡಿದ್ದು, ಇದೀಗ ಈ ಸಾಲಿಗೆ ಅಮಿತಾಬ್ ಸಹ ಸೇರಿಕೊಂಡಿದ್ದು ಕೇರಳದ ಜತೆ ನಾವಿದ್ದೇವೆ ಎಂಬ ಸಂದೇಶ ಸಾರಿದ್ದಾರೆ.

Leave a Comment