ಕೇದಾರನಾಥ, ಬದ್ರೀನಾಥ ದೇವಾಲಯಗಳು ಬಂದ್

ಉತ್ತರಾಖಂಡ, ಅ ೯- ಉತ್ತರ ಭಾರತದೆಲ್ಲೆಡೆ ಚಳಿಗಾಲ ಆರಂಭವಾಗುವ ಹಿನ್ನಲೆಯಲ್ಲಿ ದೇಶದ ಪ್ರಸಿದ್ಧ ದೇವಾಲಯಗಳಾದ ಕೇದಾರನಾಥ, ಬದ್ರೀನಾಥ ದೇವಾಲಯಗಳ ಬಾಗಿಲನ್ನು ಸಂಪೂರ್ಣವಾಗಿ ಬಂದ್ ಆಗಲಿವೆ ಎಂದು ದೇವಾಯಲದ ಆರ್ಚಕರು ತಿಳಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಚಳಿಗಾಲ ಆರಂಭವಾಗಲಿದೆ. ಈ ಕಾರಣದಿಂದ ಉತ್ತರಾಖಂಡದ ಬದ್ರೀನಾಥ ಮತ್ತು ಕೇದಾರನಾಥ ದೇವಾಲಯಗಳನ್ನು ಮುಚ್ಚಲಾಗುತ್ತಿದೆ. ಅ ೨೯ರಿಂದ ಕೇದಾರನಾಥ ದೇವಾಲಯ ಹಾಗೂ ನ ೧೭ರಿಂದ ಬದ್ರೀನಾಥ ದೇವಾಲಯದ ಬಾಗಿಲುಗಳು ಮುಚ್ಚಲ್ಪಡುತ್ತವೆ.
ಬದರೀನಾಥ್ ದೇವಾಲಯದ ಮುಖ್ಯ ಅರ್ಚಕರಾದ ಈಶ್ವರಿ ಪ್ರಸಾದ್ ನಂಬುದಿರಿ ಈ ಘೋಷಣೆ ಹೊರಡಿಸಿದ್ದಾರೆ. ಚಳಿಗಾಲ ಇರುವ ಹಿನ್ನೆಲೆ, ನವೆಂಬರ್ ೧೭ರಂದು ಸಂಜೆ ೫.೧೩ಕ್ಕೆ ಬದ್ರೀನಾಥ ದೇವಾಲಯವನ್ನು ಮುಚ್ಚಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಕೇದಾರನಾಥ ದೇವಾಲಯವನ್ನು ಅ.೨೯ರಂದು ಬೆಳಗ್ಗೆ ೮.೩೦ಕ್ಕೆ ಮುಚ್ಚಲಾಗುತ್ತದೆ. ಈ ವರ್ಷ ಕೇದಾರನಾಥ ಮತ್ತು ಬದ್ರೀನಾಥ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ದಾಖಲೆಯಾಗಿದೆ.
ಬದ್ರೀನಾಥ ಮತ್ತು ಕೇದಾರನಾಥ ದೇವಾಲಯಗಳು ಬಾಗಿಲು ಮುಚ್ಚುವಾಗ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ-ವಿಧಿ ವಿಧಾನಗಳು ನೆರವೇರಲಿವೆ. ಹಿಮಾಲಯದ ದೇವಸ್ಥಾನಗಳಾದ ಕೇದಾರನಾಥ, ಬದ್ರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಪ್ರತಿವರ್ಷ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಚಳಿಗಾಲದಲ್ಲಿ ಈ ಪ್ರದೇಶಗಳಲ್ಲಿ ಅತಿಯಾದ ಹಿಮ ಸುರಿಯುತ್ತದೆ. ಹೀಗಾಗಿ, ದೇವಾಲಯ ಹಿಮಾವೃತವಾಗಲಿದೆ. ಅಲ್ಲದೆ, ಅಲ್ಲಿಗೆ ತೆರಳುವುದು ಕೂಡ ಅಸಾಧ್ಯ. ಏಪ್ರಿಲ್-ಮೇ ತಿಂಗಳ ವೇಳೆಗೆ ಮತ್ತೆ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ.

Leave a Comment