‘ಕೇಕ್ ಕತ್ತರಿಸಿ ಪ್ರಾಣಿ ವಧೆ ನಿಲ್ಲಿಸಿ’

ಲಕ್ನೋ, ಆ. ೨೩; ಕಸಾಯಿಖಾನೆ ಸಂಸ್ಕೃತಿ ಕೊನೆಗಾಣಿಸುವ ನಿಟ್ಟಿನಲ್ಲಿ ‘ಇದ್ ಉಲ್ ಅಧಾ’ (ಬಕ್ರೀದ್) ಸಂದರ್ಭದಲ್ಲಿ ಮೇಕೆಯ ಅಣಕು ಚಿತ್ರ ಹೊಂದಿದ ಕೇಕ್‌ಗಳನ್ನು ಕತ್ತರಿಸಬೇಕು ಎಂದು ಉತ್ತರ ಪ್ರದೇಶದ ಆರ್‌ಎಸ್‌ಎಸ್ ಅಂಗ ಸಂಸ್ಥೆಯಾದ ‘ಮುಸ್ಲೀಂ ರಾಷ್ಟ್ರೀಯ ಮಂಚ್’ ತನ್ನೆಲ್ಲಾ ಸದಸ್ಯರಿಗೆ ಸೂಚನೆ ನೀಡಿರುವುದು ಇದೀಗ ವಿವಾದಕ್ಕೆ ಒಳಗಾಗಿದೆ. ಸುಮಾರು ೧೩ ಲಕ್ಷ ಸದಸ್ಯರನ್ನು ಒಳಗೊಂಡ ಮಂಚ್ ತನ್ನ ಈ ಕ್ರಮವನ್ನು ‘ಪರಿಸರ ಸ್ನೇಹಿ ಈದ್’ಎಂದು ಬಣ್ಣಿಸಿದೆ.

ಪ್ರಾಣಿ ಹಿಂಸೆಯನ್ನು ಕುರಾನ್ ಎಂದೂ ಒಪ್ಪುವುದಿಲ್ಲ ಎಂದು ಮಂಚ್‌ನ ಉಪಾಧ್ಯಕ್ಷ ರಯೀಸ್ ರಾಜಾ ಹೇಳಿದ್ದಾರೆ. ‘ಇಬ್ರಾಹಿಂನ ಭಕ್ತಿಗೆ ಮೆಚ್ಚಿ ಪ್ರವಾದಿ ಮುಹಮ್ಮದರು ಒಮ್ಮೆ ಮಾತ್ರ ಪ್ರಾಣಿ ಬಲಿ ನೀಡಲು ಆತನಿಗೆ ಸಮ್ಮಿತಿಸಿದರಷ್ಟೆ. ಇಂತಹ ಆಚರಣೆಯನ್ನು ಕುರಾನ್ ಎಲ್ಲೂ ಬೋಧಿಸಿಲ್ಲ. ಅದರ ಬದಲು, ಯಾವ ವ್ಯಕ್ತಿ ಪ್ರಾಣಿಗಳು ಪಕ್ಷಿಗಳ ಬಗ್ಗೆ ಪ್ರೀತಿ ಕಾಳಜಿ ಹೊಂದಿರುವನೋ ಅಂತಹವನ ಮೇಲೆ ದೇವರ ಕೃಪೆ ಇರುತ್ತದೆ ಎಂದು ಕುರಾನ್‌ನಲ್ಲಿ ಹೇಳಲಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

Leave a Comment