ಕೇಂದ್ರ ಸರಕಾರ ಸಂಪೂರ್ಣ ವಿಫಲ-ದೇಶಪಾಂಡೆ

ಕಲಘಟಗಿ,ಏ14:  ಲೋಕಸಭೆ ಚುಣಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇದೀಗ ಮತ್ತದೇ ಸುಳ್ಳು ಭರವಸೆಗಳನ್ನು ಹೇಳುತ್ತ ಚುಣಾವಣೆಗೆ ಸಜ್ಜಾಗಿರುವುದು ನಾಚಿಗೇಡಿನ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವ್ಹಿ.ದೇಶಪಾಂಡೆ ಹೇಳಿದರು.
ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಹಾಗೂ ಹಿರೇಹೊನ್ನಿಹಳ್ಳಿಯಲ್ಲಿ ಲೋಕಸಭೆ ಚುಣಾವಣೆ ನಿಮಿತ್ತ ವಿನಯ ಕುಲಕರ್ಣಿ ಪರ ರೋಡ್ ಶೋ ಮೂಲಕ ಮತಯಾಚಿಸಿ ಬಳಿಕ ಜರುಗಿದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
೬೦ ವರ್ಷಗಳ ಉತ್ತಮ ಜನಪರ ಆಡಳಿತ ನೀಡಿದ ಕಾಂಗ್ರೆಸ್ ಪಕ್ಷವನ್ನು ಟೀಕಿಸುವದರಲ್ಲಿಯೇ ಕಾಲ ಕಳೆದಿರುವ ಮೋದಿಯವರು ಬರೀ ವಿದೇಶ ಸುತ್ತಿರುವುದೇ ದೊಡ್ಡ ಸಾಧನೆಯಾಗಿದೆ ಎಂದರು. ದೇಶದಲ್ಲಿನ ಡ್ಯಾಂಗಳು,ವಿದ್ಯುತ್ ದೀಪ,ಸಾರಿಗೆ ವ್ಯವಸ್ಥೆ,ಆಸ್ಪತ್ರೆ ನಿರ್ಮಾಣ,ರೈತರಿಗಾಗಿ ವಿಶೇಷ ಅನುದಾನದ ಮೂಲಕ ರೈತರ ಅಭಿವೃದ್ದಿ ಸೇರಿದಂತೆ ಸಾಲಮನ್ನಾ ಹಾಗೂ ಕೈಗಾರಿಕಾ,ಹಸಿರುಕ್ರಾಂತಿ ಇವರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಹರಿಹಾಯ್ದರು.
ರೈತ ಸಾಲ ಮನ್ನಾ ಒಂದು ಶೋಕಿ ಎನ್ನುವ ಇವರು ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೇಕೆ ಎಂದು ಕಟುವಾಗಿ ಪ್ರಶ್ನಿಸಿದರು.ದೇಶಕ್ಕೆ ಸ್ವರ್ಗ ತಂದಿಟ್ಟಿದ್ದೀವಿ ಎನ್ನುವ ಇವರ ಸ್ವರ್ಗ ಕಣ್ಣಿಗೆ ಕಾಣದಾಗಿದೆ.ಮುಖ್ಯವಾಗಿ‌ಮಹಿಳೆ ಇವತ್ತು ಎಲ್ಲ ರಂಗಗಳಲ್ಲಿ ಮುಂದೊರೆದಿದ್ದಾಳೆ ಅಂದ್ರೆ ಅದಕ್ಕೆ ಮಹಿಳಾ ಮೀಸಲಾತಿಯೇ ಕಾರಣ ಅದನ್ನ ಕೂಡ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷವೇ,ಯುವಶಕ್ತಿಯನ್ನು ದೇಶಕ್ಕೆ ಪರಿಚಯ ಮಾಡಿಸಿದ್ದು ಕೂಡ ರಾಜೀವ ಗಾಂಧಿಯವರೇ ಹೊರತು ಬಿಜೆಪಿಯವರಲ್ಲ.ಇವತ್ತು ಬಡವರ,ನಿರ್ಗತಿಕರ,ಕೂಲಿ ಕಾರ್ಮಿಕರಿಗೆ ಶಕ್ತಿ ತುಂಬುದರ ಜತೆಗೆ ದೇಶದ ಸಂಪೂರ್ಣ ಅಭಿವೃದ್ದಿ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ ಎಂದರು.
ಸದ್ಯದ ಚುಣಾವಣೆಯ ದೃಷ್ಟಿಕೋನವನ್ನಿಟ್ಟುಕೊಂಡು ರಾಹುಲ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಉತ್ತಮ ಜನಪರ ಯೋಜನೆಗಳನ್ನೊಳಗೊಂಡ ಪ್ರಣಾಳಿಕೆಯನ್ನು ಹೊರಡಿಸಿದೆ, ಕಾಂಗ್ರೇಸ್ ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಶತಃಸಿದ್ದ ಈ ಭರವಸೆಗಳು ಈಡೆರುವುದು ಅಷ್ಟೆ ಸತ್ಯ ಎಂದು ಹೇಳಿದ ಅವ್ರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಮತ ಹಾಕುವುದರ ಮೂಲಕ ರಾಹುಲ ಗಾಂಧಿಯವರ ಕೈಯನ್ನು ಬಲಪಡಿಸೆಬೇಕೆಂದು ಕೇಳಿಕೊಂಡರು.
ಮಾಜಿ ಸಚಿವ ಸಂತೋಷ ಲಾಡ ಮಾತನಾಡಿ “ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬುದು ಕೇವಲ ಬಾಯಿ ಮಾತಲ್ಲಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಕಪ್ಪು ಹಣ ತರುತ್ತೇನೆ, ೧೦೦ ಸ್ಮಾರ್ಟ್ ಸಿಟಿಗಳನ್ನ ನಿರ್ಮಾಣ ಮಾಡ್ತಿನಿ, ಯುವಕರಿಗೆ ವರ್ಷಕ್ಕೆ ೨ ಕೋಟಿ ಉದ್ಯೋಗ ಕೊಡ್ತೆನಿ ಅನ್ನೋ ಭರವಸೆಗಳೆಲ್ಲ ಎಲ್ಲಿ ಹೋದವು ಎಂದು ಕೇಳಿದ ಅವರು ಈ ಭಾಗಕ್ಕೆ ಬಿಜೆಪಿ ಅವರು ಬಂದಾಗ ಅವರ ಕೈ ಹಿಡಿದು ಕೇಳಿ ಎಂದ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದವರು ಪಾಕಿಸ್ಥಾನಕ್ಕೆ ಹಾಕಿದಂಗೆ ಅನ್ನೋ ಅವರ ಹೇಳಿಕೆ ಅವರಿಗೆ ಶೋಭೆ ತರುವಂತದ್ದಲ್ಲ ಎಂದು ಕುಟುಕಿದರು.
ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿ ಪ್ರತಿಬಾರಿ ಅವರಿವರ ಗಾಳಿಯಲ್ಲಿಯೇ ಮೂರು ಬಾರಿ ಚುನಾಯಿತರಾಗಿರುವ ಜೋಶಿಯವರು ಗ್ರಾಮೀಣ ಭಾಗಕ್ಕೆ ನೀಡಿರುವ ಕೊಡುಗೆಗಳೆನಾದ್ರು ಏನು..?ಗ್ರಾಮೀಣಾಭಿವೃದ್ದಿಗೆ ಸಂಬಂಧಿಸಿದಂತೆ ಅವರ ಜತೆಗೆ ನಾನು ಈಗಲೂ ಚರ್ಚೆಗೆ ಸಿದ್ದ.ಈ ಬಾರಿ

Leave a Comment