ಕೇಂದ್ರದ ವಿರುದ್ಧ ಸಿಪಿಐ ಜನಜಾಗೃತಿ

ಕಲಬುರಗಿ ಆ 2: ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ನರೇಂದ್ರಮೋದಿ ನೇತೃತ್ವದ ಸರಕಾರದ ಆಡಳಿತ ವೈಖರಿಯ ವಿರುದ್ಧ ಜನಜಾಗೃತಿಗೆ ಸಿಪಿಐ ರಾಷ್ಟ್ರೀಯ ಮಂಡಳಿ ಸೂಚಿಸಿದ್ದು, ಆ 14 ರವರೆಗೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ನಡೆಸಲು ಸಿಪಿಐ ರಾಜ್ಯಮಂಡಳಿ ತೀರ್ಮಾನಿಸಿದೆ.

ಆ,1 ರಿಂದ ರಾಜ್ಯದಲ್ಲಿ ಆರಂಭವಾದ ಜನಜಾಗೃತಿ ಅಭಿಯಾನ ಆ 14 ರವರೆಗೆ ನಡೆಯಲಿದ್ದು,ಎಲ್ಲ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಸಭೆ, ಬಹಿರಂಗ ಸಭೆ, ವಿಚಾರ ಗೋಷ್ಠಿ ನಡೆಸಲಾಗುವದು.14 ರಂದು ಕಲಬುರಗಿಯಲ್ಲಿ ಅಭಿಯಾನ ಸಮಾರೋಪಗೊಳ್ಳಲಿದೆ  ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ ವಿ ಲೋಕೇಶ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಭಿಯಾನದ ಮುಂದುವರಿಕೆಯಾಗಿ  ದೇಶದ ನಾಲ್ಕು ದಿಕ್ಕುಗಳಿಂದ ಜಾಥಾ ಆರಂಭಿಸಿ ದೆಹಲಿಯಲ್ಲಿ ಜನಾಗ್ರಹ ರ್ಯಾಲಿ ನಡೆಸಲಾಗುವದು. ಸ.12 ರಂದು ಕನ್ಯಾಕುಮಾರಿಯಿಂದ ಆರಂಭವಾಗುವ ಜಾಥಾ  ಸ 19 ರಂದು ಕರ್ನಾಟಕ ಪ್ರವೇಶಿಸುವದು.21 ರವರೆಗೆ ರಾಜ್ಯದಲ್ಲಿ ಜಾಥಾ ನಡೆಯಲಿದೆ ಎಂದರು

ಪ್ರಾದೇಶಿಕ ಅಸಮಾನತೆಗೆ ರಾಜ್ಯ ವಿಭಜನೆ ಮತ್ತು ಪ್ರತ್ಯೇಕ ರಾಜ್ಯ ರಚನೆ ಪರಿಹಾರವಲ್ಲ .ರಾಜಕೀಯ ಇಚ್ಛಾಶಕ್ತಿಯೇ ಇದಕ್ಕೆ ಪರಿಹಾರ ಎಂಬುದು ಪಕ್ಷದ ನಿಲುವಾಗಿದೆ. ಮಾಹಿತಿ ಹಕ್ಕು ಮತ್ತು ಭ್ರಷ್ಟಾಚಾರ ನಿಗ್ರಹ ಕಾನೂನುಗಳಿಗೆ ಕೇಂದ್ರ ತಿದ್ದುಪಡಿ ಸೂಚಿಸಿರುವ ವಿಚಾರ, ಕಾನೂನಿನ ಶಕ್ತಿಯನ್ನು ಕುಂದಿಸುತ್ತದೆ. ಇದನ್ನು ರಾಜ್ಯ ಸರ್ಕಾರ ವಿರೋಧಿಸಬೇಕು ಎಂದು ಆಗ್ರಹಿಸಿದರು..

Leave a Comment