ಕೆ.ಪಿ.ಎಲ್.2019ರ ನೂತನ ಮೈಸೂರು ವಾರಿಯರ್ಸ್ ತಂಡ ಪ್ರಕಟ

ಮೈಸೂರು,ಆ.14:- ಕೆ.ಪಿ.ಎಲ್.2019ರ ನೂತನ ಮೈಸೂರು ವಾರಿಯರ್ಸ್ ತಂಡ ವನ್ನು ಪ್ರಕಟ ಮಾಡಲಾಗಿದ್ದು, ಇದೇ 16ರಿಂದ ಕೆ.ಪಿ.ಎಲ್.ಟೂರ್ನಿ ಆರಂಭವಾಗಲಿದೆ.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸೈಕಲ್‌ ಪ್ಯೂರ್ ಅಗರಬತ್ತಿಸ್ ವ್ಯವಸ್ಥಾಪಕ ನೀರ್ದೇಶಕ ಅರ್ಜುನ್ ರಂಗ 20 ಜನರ ತಂಡ ಪ್ರಕಟಿಸಲಾಗಿದೆ. ಇದೇ 16 ರಿಂದ ಕೆ.ಪಿ.ಎಲ್.ಟೂರ್ನಿ ಪ್ರಾರಂಭವಾಗಲಿದ್ದು, ಮೈಸೂರು ವಾರಿಯರ್ಸ್ ಎನ್.ಆರ್.ಸಮೂಹ ಮತ್ತು ಸೈಕಲ್‌ ಪ್ಯೂರ್ ಅಗರಬತ್ತಿಸ್ ಪ್ರಾಂಚೈಸ್ ಹೊಂದಿದೆ. ತಂಡದ ಮುಖ್ಯ ಕೋಚ್ ರಕ್ಸ್ ಮುರಳೀಧರ್ ಆಗಿದ್ದು, ತಂಡದ ನಾಯಕ ಅಮಿತ್ ವರ್ಮಾ ಆಗಿದ್ದಾರೆ. ಸುಚಿತ್ ಜೆ, ಅನಿರುದ್ಧ ಜೋಶಿ, ಶೋಯೆಬ್ ಮ್ಯಾನೇಜರ್, ವಿಶಾಖ್ ವಿಜಯ್ ಕುಮಾರ್, ಸಿದ್ದಾರ್ಥ ಕೆವಿ, ಡೇಗಾ ನಿಶ್ಚಲ್, ಮಂಜೇಶ್ ರೆಡ್ಡಿ, ಕುಶಾಲ್ ವಾಧ್ವಾನಿ, ವೆಂಕಟೇಶ್ ಎಂ, ವಿನಯ್ ಎನ್,ಸಾಗರ್, ಕಿಶನ್ ಬೆದಾರೆ, ರಾಮ್ ಸಾರಿಖ್ ಯಾದವ್, ದೇವಯ್ಯ ಕೆ.ಎಸ್, ಜಯೇಶ್ ಬಾಬು, ಶಿವಕುಮಾರ್ ಬಿ.ಯು, ಸಂಕಲ್ಪ ಶೆಟ್ಟೆಣ್ಣವರ್, ಸೌರಭ್ ಯಾದವ್, ಚೇತನ್ ಎಲ್.ಆರ್, ಉತ್ತಮ್ ಅಯ್ಯಪ್ಪ ತಂಡದಲ್ಲಿದ್ದಾರೆ. ಸಹಾಯಕ ತರಬೇತುದಾರರಾಗಿ ವಿಜಯ್ ಮುಡ್ಯಾಲ್ಕರ್ ಇದ್ದಾರೆ ಎಂದರು. ಈ ವರ್ಷ ನಮ್ಮ ತಂಡ ದ ಗುಣಮಟ್ಟದ ಬಗ್ಗೆ ಹೆಮ್ಮೆ ಇದೆ. ಈ ವರ್ಷ ನಮ್ಮ ತಂಡ ಉತ್ತಮ ಮತ್ತು ಉತ್ತೇಜಕ ಕ್ರಿಕೆಟ್ ನೊಂದಿಗೆ ಮನರಂಜನೆ ನೀಡಲಿದ್ದೇವೆ ಎಂದರು.
ಇದೇ ವೇಳೆ ನೆರೆ ಸಂತ್ರಸ್ತರಿಗಾಗಿ ಮಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂ. ಚೆಕ್ ವಿತರಿಸಿದರು. ಅಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಿಗೆ 50 ಸಾವಿರ ರೂ.ಮೌಲ್ಯದ ಮೇಣದ ಬತ್ತಿ ಮತ್ತು ಬೆಂಕಿಪೊಟ್ಟಣಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ತಂಡದ ಪ್ರಾಯೋಜಕರನ್ನು ಪರಿಚಯಿಸಲಾಯಿತು .
ತಂಡದ ನಾಯಕ ಅಮಿತ್ ವರ್ಮ ಮಾತನಾಡಿ ನಮ್ಮ ತಂಡ ಪ್ರತಿಭೆ ಮತ್ತು ಅನುಭವದ ಅತ್ಯುತ್ತಮ ಮಿಶ್ರಣವಾಗಿದೆ. ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಎಲ್ಲ ಮೈಸೂರಿಗರು ನಮ್ಮ ತಂಡವನ್ನು ಬೆಂಬಲಿಸಿ ಎಂದರು.

Leave a Comment