ಕೆಸರು ಗದ್ದೆಯಂತಾದ ಮುಖ್ಯ ರಸ್ತೆ ಮೇಲೆ ಭತ್ತ ನಾಟಿ !

ಕೆಂಭಾವಿ,ಆ.30-ಜನರ ಸಮಸ್ಯೆಗಳಿಗೆ ದನಿಯಾಗಬೇಕಾಗಿದ್ದ ಅಧಿಕಾರಿಗಳ ದಿವ್ಯ ಮೌನದ ಪರಿಣಾಮವಾಗಿ

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಂದಾದ ಮುಖ್ಯ ಬಜಾರ ರಸ್ತೆಯು ಮಳೆ ಬಂದರೆ ಸಂಪೂರ್ಣ ಕೆಸರುಮಯವಾಗಿ ಗದ್ದೆಯಂತಾಗಿದೆ.

ಇದರಿಂದಾಗಿ ಸಾರ್ವಜನಿಕರಿಗೆ ತಿರುಗಾಡಲು ತೊಂದರೆಯಾಗುತ್ತಿದ್ದು, ಅನೇಕ ಬಾರಿ ಮನವಿ ಮಾಡಿಕೊಂಡರು ಪುರಸಭೆ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡಾಗಿದ್ದಾರೆ. ಮುಖ್ಯ ಬಜಾರದ  ಹನುಮಾನ ದೇವಸ್ಥಾನದ ಮುಂದೆ ಚರಂಡಿ ನೀರು ರಸ್ತೆ ಮೇಲೆ ನಿಂತು ಕೆಸರು ಗದ್ದೆಯಾಗಿದೆ.

ಕೆಸರು ಗದ್ದೆಯಂತಾದ ರಸ್ತೆಯ ಮೇಲೆ ಭತ್ತದ ನಾಟಿ ಮಾಡಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಪಟ್ಟಣದ ಜನತೆ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರು ಸಂಚರಿಸಲು ಪ್ರಮುಖ ರಸ್ತೆ ಇದಾಗಿದ್ದು, ಇನ್ನಾದರೂ ಪಟ್ಟಣದ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವರೆ ಎಂಬುವುದನ್ನು ಕಾದು ನೋಡಬೇಕಾಗಿದೆ.

Leave a Comment