ಕೆಲಸದ ಜೊತೆ ಕ್ರೀಡೆಯಲ್ಲಿ ಪಾಲ್ಗೊಂಡರೆ ಆರೋಗ್ಯ ವೃದ್ಧಿ

ಚಾಮರಾಜನಗರ ಜ.18- ಸರ್ಕಾರಿ ನೌಕರರು ಕಚೇರಿಯ ಕೆಲಸದ ಜೊತೆಗೆ ವ್ಯಾಯಮ ಹಾಗೂ ಕ್ರೀಡೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಚಾಮರಾಜನಗರ ಜಿಲ್ಲಾ ಪಂಚಾಯಿತ್ ಉಪ ಕಾರ್ಯದರ್ಶಿ ಹನುಮರಸಯ್ಯ ತಿಳಿಸಿದರು.
ನಗರದ ಬಿ.ಆರ್./ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತ್, ಯುವಜನ ಸಬಲೀಕರಣ ಹಾಗೂ ಕ್ರೀಡಾಇಲಾಖೆ ಸರ್ಕಾರಿ ನೌಕರರ ಸಂಘ ಇವರ ಸಹಯೋಗದಲ್ಲಿ ನಡೆದ ಕ್ರೀಡಾಕೂಟದ ಸಮಾರೋಪ ಭಾಷಣ ಮಾಡಿದರು.
ಮನುಷ್ಯನಿಗೆ ಆರೋಗ್ಯ ಹಾಗೂ ಮನಸ್ಸು ಶುದ್ದದಿಂದ ಇರಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಇದರಿಂದ ಅನಂದ ಸಂತೋಷ ಸಿಗಲಿದೆ. ಪ್ರತಿವರ್ಷವು ಸರ್ಕಾರಿ ನೌಕರರು ಕ್ರೀಡಾಕೂಟವನ್ನು ಆಯೋಜಿಸುತ್ತಾರೆ ವರ್ಷಕೊಮ್ಮೆ ಕ್ರೀಡೆಗಳಲ್ಲಿ ಭಾಗವಹಿಸಿದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಪ್ರತಿನಿತ್ಯ ಒಂದು ಗಂಟೆಯಾದರು ಸಾಧನೆ ಮಾಡಿದರೆ ಸ್ವಲ್ಪವಾದರು ಗುರಿಮುಟ್ಟ ಬಹುದು ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯಿಂದ ಕ್ರೀಡೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ವಿಜೇತರಾದವರು ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಗೆ, ತಾಲ್ಲೂಕಿಗೆ ಕೀರ್ತಿ ತನ್ನಿರಿ ಎಂದು ತಿಳಿಸಿದರು.
ಬಹುಮಾನ ವಿತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ ಎಲ್ಲಾ ಇಲಾಖೆಯ ಸರ್ಕಾರಿ ನೌಕರರು ಒಟ್ಟಿಗೆ ಕ್ರೀಡೆ ಮತ್ತು ಸಾಂಸ್ಕೃಕವಾಗಿ ಭಾಗವಹಿಸಲು ಇದೊಂದು ಸುವರ್ಣ ಅವಕಶವಾಗಿದೆ. ಈ ಕ್ರೀಡಾಕೂಟವೂ ಉತ್ತಮ ಮಟ್ಟದಲ್ಲಿ ನಡೆದಿರುವುದು ಸಂತೋಷದ ವಿಷಯವಾಗಿದೆ. ಸರ್ಕಾರಿ ನೌಕರರು ಕ್ರೀಡೆಗಳಲ್ಲಿ ಭಾಗವಹಿಸಿ ನಿಮ್ಮ ಮಕ್ಕಳಿಗೂ ಕ್ರೀಡಾಸಕ್ತಿ ಬೆಳೆಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂ ಘದ ಅಧ್ಯಕ್ಷರಾದ ಆರ್.ರಾಚಪ್ಪ ಮಾತನಾಡಿ. ನಮ್ಮ ಈ ಕ್ರೀಡಾಕೂಟ ನಡೆಸಲು ರಾಜ್ಯ ಸರ್ಕಾರ ನಮಗೆ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಟ್ಟಿದೆ. ಚಾಮರಾಜನಗರ ಜಿಲ್ಲಾಡಳಿತದ ಅಧಿಕಾರಿಗಳು ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟಕ್ಕೆ ಪ್ರೊತ್ಸಾಹ ನೀಡಿದ್ದಾರೆ ಸರ್ಕಾರಿ ನೌಕರರು ಉತ್ತಮ ರೀತಿಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ. ಬಹುಮಾನ ಪಡೆದ ವಿಜೇತರು ಮೈಸೂರಿನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.’
ಕ್ರೀಡೆಗಳಲ್ಲಿ ಮತ್ತು ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದವರಿಗೆ ವೇದಿಕೆಯ ಗಣ್ಯರು ಬಹುಮಾನ ವಿತರಿಸಿದರು.
ಕ್ರೀಡಾಕೂಟದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ರಾಚಪ್ಪ, ಗೌರವಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಶಾಂತಮ್ಮ ಹಾಗೂ ಶಿಕ್ಷಕ ನಂಜುಂಡಸ್ವಾಮಿ(ಪಾಪು)ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕ್ರೀಡಾ ಇಲಾಖೆಯ ಚಲುವಯ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಧ್ಯಕ್ಷರಾದ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿ ಶಾಂತಮ್ಮ, ಉಪಾಧ್ಯಕ್ಷರಾದ ಸಿದ್ದರಾಜು, ಕೆ.ಬಸವರಾಜು, ನೇತ್ರಾವತಿ, ಪಧಾದಿಕಾರಿಗಳಾದ ಗಜೇಂದ್ರ, ರಾಚಯ್ಯ.ಕೆ, ಶಿವಕುಮಾರ್. ಎಂ, ಸಿ.ಕೆ.ರಾಮಸ್ವಾಮಿ, ಶಭಾನಅಂಜುಮ್, ಯಂಕನಾಯಕ, ಮಂಜುನಾಥ್, ಚಿಕ್ಕಣ್ಣ, ಪುಟ್ಟಸ್ವಾಮಿ, ಯಳಂದೂರು ತಾಲ್ಲೂಕು ಕಾರ್ಯದರ್ಶಿ ವೈ.ಎಂ. ಮಂಜುನಾಥ್, ಫಣಿಷ್, ಶಿಕ್ಷಕರ ಸಂಘದ ಎಸ್.ಪ್ರಕಾಶ್, ಎಂ..ರಾಜು, ಪುಷ್ಪಲತಾ, ಎಸ್.ನೇತ್ರಾವತಿ, ಶಾಂತರಾಜು, ಮಧು, ಇನ್ನು ಮುಂತಾದವರು ಹಾಜರಿದ್ದರು.

Leave a Comment