ಕೆಲಸದಿಂದ ಕೈಬಿಟ್ಟಿರುವ ಕ್ರಮ ಖಂಡಿಸಿ ಪ್ರತಿಭಟನೆ

ಮೈಸೂರು. ಸೆ.11- 6 ಜನ ಒಳಚರಂಡಿ ಪೌರಕಾರ್ಮಿರನ್ನು ಕೆಲಸದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ನ್ಯಾಯ ಸಿಗುವವರೆಗೂ ಮೈಸೂರು ನಗರ ಪಾಲಿಕೆಯ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ವತಿಯಿಂದ ಮಹಾ ನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ಸುದ್ಧಿಗಾರರೊಂದಿಗೆ ಪ್ರತಿಭಟನಾ ನಿರತರು ಮಾತನಾಡಿ ಒಳಚರಂಡಿ ಪೌರಕಾರ್ಮಿಕರನ್ನು ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಐದು ವರ್ಷ ದುಡಿಸಿಕೊಂಡು ಏಕಾಏಕಿ 3 ತಿಂಗಳಿನಿಂದ ಸಂಬಳವಿಲ್ಲದೆ ಸತಾಯಿಸಿ ಸಂಬಳ ನೀಡದೇ ಕೈಬಿಟ್ಟಿದ್ದಾರೆ. ಪೌರಕಾರ್ಮಿಕರಿಗೆ ಕುಟುಂಬ ನಿರ್ವಹಣೆ, ಜೀವನ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯುಂಟಾಗಿದೆ. ಕಾರ್ಮಿಕರು ಗುತ್ತಿಗೆದಾರರಿಗೆ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಆರು ಜನ ಒಳಚರಂಡಿ ಪೌರ ಕಾರ್ಮಿಕರು ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಒಂದು ವೇಳೆ ನ್ಯಾಯ ಸಿಗದಿದ್ದಲ್ಲಿ ಎಲ್ಲಾ ಪೌರಕಾರ್ಮಿಕರು ಕೆಲಸವನ್ನು ನಿಲ್ಲಿಸಿ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾರ್ಯಾಧ್ಯಕ್ಷ ಎನ್.ರಾಜು, ಅಧ್ಯಕ್ಷ ಮಂಚಯ್ಯ, ಉಪಾಧ್ಯಕ್ಷ ಕುಮಾರಸ್ವಾಮಿ, ಜಂಟಿ ಕಾರ್ಯದರ್ಶಿ ದಿನೇಶ್ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Comment