ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

ಜಗಳೂರು.ಫೆ.17; ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ 480 ಮಂದಿ ಕೂಲಿ ಕಾರ್ಮಿಕರಿಗೆ ತಾಲೂಕು ಆಡಳಿತದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿತ್ತು.

ತಾಲೂಕಿನ ಭರಮಸಮುದ್ರ ಗ್ರಾಮದ ಕೆರೆಯಲ್ಲಿ ಕಳೆದ 20 ದಿನಗಳಿಂದ ಎನ್‍ಆರ್ ಇಜಿಎ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು ಕೂಲಿಕಾರರಿಗೆ ಯಾವುದೇ ಖಾಯಿಲೆ ಬಾರದಂತೆ ತಾಲೂಕು ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ತಪಾಸಣಾ ಶಿಬಿರವನ್ನು ಏರ್ಪಡಿಸಿ ಈ ವೇಳೆ ತಾಪಂ ಕಾರ್ಯನಿರ್ವಾಹಕಾಧಿಕಾರಿ ಬಿ.ಲಕ್ಷ್ಮಿಪತಿ ಮಾತನಾಡಿ ಈಗಾಗಲೇ ತಾಲೂಕಿನಾದ್ಯಂತ ಬರಗಾಲ ಎದುರಾಗಿದ್ದು ಕೂಲಿಕಾರರ ಕೈಗೆ ಕೆಲಸವಿಲ್ಲದೇ ಮಲೆನಾಡು ಪ್ರದೇಶಗಲಿಗೆ ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಕೈಗೊಂಡು ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದ್ದು ಭರಮಸಮುದ್ರ ಕೆರೆ ಸೇರಿದಂತೆ ತಾಲೂಕಿನ ಗೌರಿಪುರ, ಹೊಸಕೆರೆ, ಬಿಳಿಚೋಡು, ಜಮ್ಮಾಪುರ, ಚಿಕ್ಕರಕೆರೆ, ಹಿರೆಅರಕೆರೆ, ಪಾಲನಾಯಕನಕೋಟೆ, ಕೆಳಗೋಟೆ ಕೆರೆ ಮತ್ತು ಗೋಕಟ್ಟೆಗಳಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು 10 ಜನರ ತಂಡವೂ 10ಮೀ ಉದ್ದ 10 ಮೀ ಅಗಲವುಳ್ಳ ಗುಂಡಿ ತೆಗೆಯಲಿದ್ದು ಒಂದು ಕುಟುಂಬಕ್ಕೆ 150 ದಿನಗಳ ಕಾಲ 224 ರೂ ನಂತೆ ಕೂಲಿ ನೀಡಲಾಗುವುದು. ಒಂದು ವಾರದಲ್ಲಿ ಕೂಲಿಕಾರರ ಖಾತೆಗೆ ಹಣ ಜಮಾ ಮಾಡಲಾಗುವುದು. ಕೂಲಿ ಕೆಲಸ ಮಾಡುವ ವೇಳೆ ಅಪಘಾತ ಸಂಭವಿಸಿ ಕೈಕಾಲು ಕಳೆದುಕೊಂಡವರಿಗೆ 25 ಸಾವಿರ ಪರಿಹಾರ ನೀಡಲು ಅವಕಾಶ ಇದ್ದು ಆಕಸ್ಮಿಕವಾಗಿ ಆರೋಗ್ಯ ಹದಗೆಡದಂತೆ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಮುಂಬರುವ ದಿನಗಳಲ್ಲಿ ಕಾಮಗಾರಿ ನಡೆಯಲಿರುವ ವಿವಿಧ ಕೆರೆಗಳಲ್ಲಿ ಕೂಲಿ ಕೆಲಸ ಮಾಡುವ ಕೂಲಿಕಾರರಿಗೂ ಶಿಬಿರವನ್ನು ಏರ್ಪಡಿಸಿ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ನಾಗರಾಜ್, ಕೀಲು ಮೂಳೆ ತಜÐ ಡಾ. ಮಲ್ಲಪ್ಪ, ಡಾ. ಮಲ್ಲಿಕಾರ್ಜುನ್, ಡಾ. ಮಂಜುನಾಥ್, ಸಿಬ್ಬಂದಿ ಡಿ.ಟಿ. ಉಮೇಶ್, ಅಜಯ್, ಪಂಕಜಾ, ಸೇರಿದಂತೆ ಮತ್ತಿತರರು ಶಿಬಿರದಲ್ಲಿ ಹಾಜರಿದ್ದರು.

Leave a Comment