ಕೆರೆಗೆ ನೀರು, ಶೀಘ್ರ ಅನುಮತಿ

ಬ್ಯಾಡಗಿ,ಅ.12- ಕೆಂಗೊಂಡ ಗ್ರಾಮ ಸೇರಿದಂತೆ ಅದರ ಸುತ್ತಮುತ್ತ ಬರಲಿರುವ ಗ್ರಾಮಗಳಲ್ಲಿಯ ಕೆರೆಗಳಿಗೆ ನೀರು ತುಂಬಿಸಲು 17.5 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆಯೊಂದನ್ನು ಸಿದ್ದ ಪಡಿಸಲಾಗಿದ್ದು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾತ್ಮಕವಾಗಿ ಅನುಮತಿ ನೀಡಲಿದ್ದಾರೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಅವರು ತಾಲೂಕಿನ ಕೆಂಗೊಂಡ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ 12 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಭಾಭವನದ ಕಟ್ಟಡಕ್ಕೆ ಗುದ್ದಲಿಪೂಜೆ ಹಾಗೂ ಮೋಟೆಬೆನ್ನೂರಿನ ಸಿ.ಆರ್.ಬಳ್ಳಾರಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಎನ್‍ಎಸ್‍ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಕೆಂಗೊಂಡ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಎನ್‍ಎಸ್‍ಎಸ್ ಶಿಬಿರದ ಮೂಲಕ ಗ್ರಾಮಗಳಲ್ಲಿರುವ ಶೌಚಾಲಯ ಹೊಂದದೇ ಇರುವವರ ಮನವೊಲಿಸಿ ಶೌಚಾಲಯ ಕಟ್ಟಡ ಕಟ್ಟಿಕೊಳ್ಳುವಂತ ಕಾರ್ಯದಲ್ಲಿ ಅವರನ್ನು ಅಣಿಗೊಳಿಸಿವ ಮೂಲಕ ಗ್ರಾಮದಲ್ಲಿರುವ ಜನತೆಯನ್ನು ಆರೋಗ್ಯ ಹೊಂದುವಂತ ಮಹತ್ತರ ಕಾರ್ಯದ ಬಗ್ಗೆ ತಿಳುವಳಿಕೆ ನೀಡಿ ಗ್ರಾಮವನ್ನು ಸುಂದರವಾಗಿರಿಸುವ ಮೂಲಕ ಎನ್‍ಎಸ್‍ಎಸ್ ಶಿಬಿರದ ಪ್ರಯೋಜನವನ್ನು ಗ್ರಾಮಸ್ಥರಿಗೆ ಮುಟ್ಟಿಸಿ ಅದರ ಸದುಪಯೋಗವನ್ನು ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರು ಹೊಂದುವಂತೆ ಮನವಿ ಮಾಡಿದರು.
ಗ್ರಾ.ಪಂ.ಸದಸ್ಯ ಚಂದ್ರಣ್ಣ ಗುಡಗೂರ ಮಾತನಾಡಿ ಗ್ರಾಮದಲ್ಲಿ ಶಾಸಕ ಬಸವರಾಜ ಶಿವಣ್ಣನವರ ತಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಗ್ರಾಮದ ಅನೇಕ ಮೂಲಭೂತ ಬೇಡಿಕೆಗಳಿದ್ದವು. ಅವುಗಳೆಲ್ಲವನ್ನು ಶಾಸಕರು ನರವೇರಿಸಿದ್ದು, ಇನ್ನೂಳಿದ ಕೆಲವೊಂದು ಬೇಡಿಕೆಗಳಿದ್ದು ಅವುಗಳನ್ನೂ ಕೂಡಾ ಈಡೇರಿಸಲು ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದರು.
ನಿವೃತ್ತ ಪ್ರಾಚಾರ್ಯ ಎಸ್.ಎನ್.ಯಮನಕ್ಕನವರ ಮಾತನಾಡಿ ಶಾಸಕರು ತಾಲೂಕಿನ ಎಲ್ಲ ಗ್ರಾಮಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.ಇಂತಹ ಶಾಸಕರ ಅಗತ್ಯ ಅತೀ ಅವಶ್ಯವಿದ್ದು, ಮುಂದಿನ ದಿನಗಳಲ್ಲಿ ಇಂಥಹ ಶಾಸಕರೇ ಆಯ್ಕೆಯಾದಲ್ಲಿ ಗ್ರಾಮಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗಲು ಸಾಧ್ಯವೆಂದರು.
ಪ್ರಾಸ್ತಾವಿಕವಾಗಿ ಪ್ರಾಚಾರ್ಯ ಎ.ಎಸ್.ದೇಸೂರ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷ ಕಲ್ಲಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾ.ಪಂ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ನೀಲಮ್ಮ ಮಡಿವಾಳರ, ಬೀರಣ್ಣ ಬಣಕಾರ, ಶಂಕ್ರಗೌಡ್ರ ಪಾಟೀಲ, ಜಿ.ಬಿ.ಮಾಗಳ, ನಾಗರಾಜ ಕುಂಬಾರ. ಕೆ.ಡಿ.ಪಾಟೀಲ, ಸಿದ್ದನಗೌಡ್ರ ಪಾಟೀಲ, ಕಲ್ಲನಗೌಡ್ರ ಪಾಟೀಲ, ನಾಗರಾಜ ಕಂಬಾರ, ಕೃಷ್ಣಪ್ಪ ಮಡಿವಾಳರ, ಗುತ್ತಿಗೆದಾರ ಅಶೋಕ ಹರನಗಿರಿ, ದ್ಯಾಮನಗೌಡ್ರ ಪಾಟೀಲ, ಚನ್ನವೀರಗೌಡ್ರ ಪಾಟೀಲ, ನಿರ್ಮಿತಿ ಕೇಂದ್ರದ ಇಂಜನೀಯರ ಎಚ್.ಡಿ.ಶಾಂತಕುಮಾರ, ರಾಜನಗೌಡ್ರ ಪಾಟೀಲ ಉಪಸ್ಥಿತರಿದ್ದರು. ಸರಸ್ವತಿ ಕಮ್ಮಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕೆ.ಪಿ.ಬ್ಯಾಡಗಿ ಸ್ವಾಗತಿಸಿ, ಬಿ.ಎನ್.ಹುರಳಿ ನಿರೂಪಿಸಿ ಎಂ.ಎ.ಮುಲ್ಲಾ ವಂದಿಸಿದರು.

Leave a Comment