ಕೆಜಿಎಫ್ -2 ಪೋಸ್ಟರ್ ಬಿಡುಗಡೆ

ನವದೆಹಲಿ, ಜು 26 – ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್’ ಚಿತ್ರಕ್ಕೆ ಸಿನಿಪ್ರಿಯರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಜಿಎಫ್ -2 ಅವತರಣಿಕೆ ನಿರ್ಮಾಣಕ್ಕೆ ಮುಂದಾಗಿರುವ ಚಿತ್ರತಂಡ ಶುಕ್ರವಾರ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದೆ.

ಈ ವರ್ಷದ ಆರಂಭದಲ್ಲಿ ಈ ಚಿತ್ರದ ಚಿತ್ರೀಕರಣದ ಆರಂಭಗೊಂಡಿದ್ದು, ಈ ಚಿತ್ರದ ‘ಅದೀರ’ ಎಂಬ ಪಾತ್ರದ ಪೋಸ್ಟರ್ ಬಿಡುಗಡೆಗೊಂಡಿದೆ.  ಈ ಚಿತ್ರವನ್ನು ನಿರ್ಮಾಣ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದು ಸಿಂಹದ ಉಂಗುರುವನ್ನು ಒಳಗೊಂಡ ಮುಷ್ಠಿಯನ್ನು ಬಿಂಬಿಸುತ್ತಿದೆ.

ಸುಧಾರಿತ ತಂತ್ರಜ್ಞಾನವನ್ನೊಳಗೊಂಡ ಈ ಚಿತ್ರ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲೂ ಬಿಡುಗಡೆಗೊಳ್ಳಲಿದೆ. ಇದು ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರಿಗೂ ಮೆಚ್ಚುಗೆಯಾಗುವ ಚಿತ್ರ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರದಲ್ಲಿ  ಯಶ್ ಜೊತೆಗೆ, ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಕೆಜಿಎಫ್ ಚಿತ್ರ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡಿತ್ತು. ಚಿತ್ರದ ಯಶಸ್ಸಿನಿಂದ ಎರಡನೇ ಅವತರಣಿಕೆಯ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

ಕೆಜಿಎಫ್ ದೇಶಾದ್ಯಂತ ಕನ್ನಡದ 400, ಹಿಂದಿಯ 1500, ತೆಲುಗಿನ 400, ತಮಿಳಿನ 100 ಹಾಗೂ ಮಲೆಯಾಳಿ ಭಾಷೆಯ 60 ಸೇರಿ ಒಟ್ಟು 2460 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು.

ಕೆಜಿಎಫ್ ಚಿತ್ರ ನಿರ್ಮಿಸಿದ್ದ  ರಿತೇಶ್ ಸಿದ್ವಾನಿ ಹಾಗೂ ಫರಾನ್ ಅಕ್ತರ್ ಅವರ ಎಕ್ಸೆಲ್ ಎಂಟರ್ ಟೈನ್ ಮೆಂಟ್ ನಿರ್ಮಾಣ  ಸಂಸ್ಥೆ ಕೆಜಿಎಫ್ -2 ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.

Leave a Comment