ಕೆಜಿಎಫ್-2 ಚಿತ್ರೀಕರಣಕ್ಕೆ ಮಧ್ಯಂತರ ತಡೆ

ಬೆಂಗಳೂರು.ಆ.27. ಕೋಲಾರದ ಕೆ ಜಿ ಎಫ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಚಿತ್ರೀಕರಣಕ್ಕೆ, ಕೋಲಾರ ಜೆಎಂಎಫ್ ಸಿ ಕೋರ್ಟ್ ಚಿತ್ರೀಕರಣ ನಡೆಸದಂತೆ ಮಧ್ಯಂತರ ತಡೆಯನ್ನು ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಕೆಜಿಎಫ್-2 ಚಿತ್ರ ತಂಡಕ್ಕೆ ಬಿಗ್ ಶಾಕ್ ನೀಡಿದೆ.

ಕೋಲಾರದ ಕೆಜಿಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಕೆಜಿಎಫ್ 2 ಚಿತ್ರದ ಚಿತ್ರೀಕರಣವನ್ನು ಸೈನೈಡ್ ಗುಡ್ಡದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಇಂತಹ ಶೂಟಿಂಗ್ ಗೆ ತಡೆ ನೀಡಬೇಕು. ಸೈನೈಡ್ ಗುಡ್ಡದಲ್ಲಿ ಶೂಟಿಂಗ್ ಗೆ ಅವಕಾಶ ನೀಡಬಾರದು ಎಂದು ಶ್ರೀನಿವಾಸ್ ಎಂಬುವರು ಕೋಲಾರದ ಕೆಜಿಎಫ್ ನ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಕೆಜಿಎಫ್ ನ ಸಿವಿಲ್ ಕೋರ್ಟ್, ಶ್ರೀನಿವಾಸ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ, ಕೋಲಾರದ ಕೆಜಿಎಫ್ ನ ಸೈನೈಡ್ ಗುಡ್ಡದಲ್ಲಿ ನಡೆಸಲಾಗುತ್ತಿದ್ದ ಶೂಟಿಂಗ್ ನಡೆಸದಂತೆ ತಡೆ ನೀಡಿ, ಚಿತ್ರತಂಡಕ್ಕೆ ನೋಟೀಸ್ ಜಾರಿ ಮಾಡಿದೆ. ಈ ಮೂಲಕ ಕೆಜಿಎಫ್ – 2 ಚಿತ್ರೀಕರಣವನ್ನು ಸೈನೈಡ್ ಗುಡ್ಡದಲ್ಲಿ ನಡೆಸುತ್ತಿದ್ದಕ್ಕೆ ಬ್ರೇಕ್ ಬಿದ್ದಿದೆ.

Leave a Comment