ಕೆಎಸ್‌ಆರ್‌ಟಿಸಿಗೆ 36 ಕೋ.ರೂ ನಷ್ಟ

ಬೆಂಗಳೂರು, ಮಾ ೨೩- ಕೊರೊನಾ ಹೊಡೆತಕ್ಕೆ ದಿನೇ ದಿನೇ ತತ್ತರಿಸಿರುವ ಕೆಎಸ್‌ಆರ್‌ಟಿಸಿಗೆ ಇದುವರೆಗೂ ೩೬ ಕೋಟಿ ರೂ ನಷ್ಟ ಸಂಭವಿಸಿದೆ. ಇಂದು ಕೂಡ ಕೆಎಸ್‌ಆರ್‌ಟಿಸಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿಲಾಗಿದೆ.

ಇನ್ನು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಚಾರವಿಲ್ಲದೇ ಜನರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದು, ಮೆಕ್ರಿ ವೃತ್ತದಿಂದ ಬಳ್ಳಾರಿಗೆ ಹೋಗಲು ಬರೋಬ್ಬರಿ ೮೦೦ ರೂ ಸುಲಿಗೆ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.

೫೦ ವರ್ಷ ಮೇಲ್ಪಟ್ಟ ನೌಕರರಿಗೆ ರಜೆ..?
ಕೊರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿಯ ೫೦ ವರ್ಷ ಮೇಲ್ಪಟ್ಟ ನೌಕರರಿಗೆ ರಜೆ ನೀಡಲು ಬಿಎಂಟಿಸಿ ಮುಂದಾಗಿದೆ. ಆರೋಗ್ಯದ ವಿಚಾರವಾಗಿ ರಜೆ ನೀಡಲು ಬಿಎಂಟಿಸಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಿಎಂಟಿಸಿಯಲ್ಲಿ ೫೦ ವರ್ಷ ಮೇಲ್ಪಟ್ಟ ಮಧುಮೇಹಿಗಳಿಗೆ ರಜೆ ನೀಡಲು ಬಿಎಂಟಿಸಿ ಮುಂದಾಗಿದೆ ಎನ್ನಲಾಗಿದೆ.

 

Leave a Comment