ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರು ನಿಯಮ ಪಾಲಿಸಲು ಸೂಚನೆ

ಕುಣಿಗಲ್, ಮೇ ೨೩- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕುಣಿಗಲ್ ಘಟಕದಿಂದ ಸಾರಿಗೆ ಸೇವೆ ಕಲ್ಪಿಸಿದ್ದು, ಪ್ರಯಾಣಿಕರು ಕಡ್ಡಾಯವಾಗಿ ನಿಯಮ ಪಾಲಿಸಬೇಕು ಎಂದು ಕೆ.ಎಸ್.ಆರ್.ಟಿ.ಸಿ ಡಿಪೋ ವ್ಯವಸ್ಥಾಪಕರಾದ ಮಂಜುನಾಥ್ ತಿಳಿಸಿದ್ದಾರೆ.

ಕುಣಿಗಲ್ ಘಟಕದಿಂದ ಪ್ರಮುಖ ಬಸ್ ನಿಲ್ದಾಣದಲ್ಲಿ ಒಳಗೆ ಬರುವ ಪ್ರಯಾಣಿಕರನ್ನು ಒಂದೇ ದ್ವಾರದಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪ್ರಯಾಣಿಕರನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗುವುದು. ಅವರ ವಿವರಗಳನ್ನು ಪ್ರವೇಶ ದ್ವಾರದಲ್ಲೇ ದಾಖಲಿಸಿ ತಾಪಮಾನ, ಶೀತ, ಕೆಮ್ಮು, ಜ್ವರ ಕಂಡು ಬಂದಲ್ಲಿ ಆರೋಗ್ಯಕಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

ಬಸ್ಸುಗಳನ್ನು ಹತ್ತುವಾಗ ಪ್ರಯಾಣಿಕರು, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈಗಾಗಲೇ ಬೆಂಗಳೂರು, ತುಮಕೂರು, ಗ್ರಾಮಾಂತರ ಪ್ರದೇಶಕ್ಕೆ ಬಸ್ಸುಗಳನ್ನು ನಿಯೋಜನೆ ಮಾಡಿಕೊಂಡಿದ್ದು, ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ  ಆಗಮಿಸುತ್ತಿಲ್ಲ. ತುಮಕೂರಿನಿಂದ ಮೈಸೂರು, ಕುಣಿಗಲ್‍ನಿಂದ ಬೆಂಗಳೂರು ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿದ್ದು, ಆದರೂ ಸಹ ಶೇ. 50 ರಷ್ಟು ಬಸ್ಸುಗಳನ್ನು ನಿಲ್ದಾಣದಲ್ಲಿ ವ್ಯವಸ್ಥೆ ಮಾಡಿದ್ದು, ಒಂದು ಬಸ್ಸಿನಲ್ಲಿ 30 ರಂತೆ ಪ್ರಯಾಣಿಸುವ ಅವಕಾಶ ಕಲ್ಪಿಸಿ ವಾಹನ ಹತ್ತುವಾಗ ಸಾಮಾಜಿಕ ಅಂತರ, ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಲಾಗಿದೆ.

ಸೀನುವಾಗ ಮತ್ತು ಕೆಮ್ಮುವಾಗ ಟಿಶ್ಯೂ ಕರವಸ್ತ್ರದಿಂದ ಬಾಯಿಯನ್ನ ಮುಚ್ಚಿಕೊಳ್ಳಬೇಕು, ಹಿರಿಯ ನಾಗರಿಕರು, ಮಧುಮೇಹ, ಅಸ್ತಮಾ ಇತರೆ ಕಾಯಿಲೆಯಿಂದ ಬಳಲುವವರು ಪ್ರಯಾಣದಿಂದ ದೂರ ಇರುವುದು ಒಳ್ಳೆಯದು. ಚಾಲಕರು ಮತ್ತು ನಿರ್ವಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕಾಗಿದೆ.

ಈಗಾಗಲೇ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ಬಸ್ ನಿಲ್ದಾಣದ ಸಹಾಯವಾಣಿ ಸಂಖ್ಯೆ 9741497033 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

Leave a Comment