ಕೆಂಪೇಗೌಡರನ್ನು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು, ಜೂ 27 – ರಾಜ್ಯಾದ್ಯಂತ ಇಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿದೆ. ರಾಜ್ಯ ರಾಜಧಾನಿ ಸೇರಿದಂತೆ ಎಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ, ಸ್ಯಾಂಡಲ್ ವುಡ್ ನ ಬಹುತೇಕ ನಟ, ನಟಿಯರು ಕೇಂಪೇಗೌಡರನ್ನು ಸ್ಮರಿಸಿದ್ದಾರೆ.
“ನಾಡಪ್ರಭು ಕೆಂಪೇಗೌಡರು ಹಾಗೂ ಅವರ ಕುಟುಂಬ ಸಾಕಷ್ಟು ವರ್ಷಗಳು ಶ್ರಮಿಸಿ ತಮ್ಮ ಕನಸಿನ ರಾಜಧಾನಿ ಬೆಂಗಳೂರು ಸಾಮಾನ್ಯ ಜನರಿಗೆ ಆಸರೆಯಾಗಿರಲೆಂದು ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆಗಳೊಂದಿಗೆ ಕಟ್ಟಿಕೊಟ್ಟವರು. ಹಲವಾರು ದೇವಾಲಯಗಳು, ಕೆರೆಗಳು, ಮಹಾದ್ವಾರಗಳು, ಶಾಲೆಗಳನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ” ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

Leave a Comment