ಕೃಷ್ಣಾ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ವಿಜಯಪುರ, ಫೆ.28-ಕೌಟುಂಬಿಕ ಕಲಹದಿಂದ ಬೇಸತ್ತು ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೊಲ್ಹಾರ ಕೃಷ್ಣಾನದಿಯ ಹಿನ್ನಿರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಳಲಿ ಗ್ರಾಮದ ನಿವಾಸಿ ಅಶೋಕ ಹವಾಲ್ದಾರ ಅವರ ಪತ್ನಿ ರೇಣುಕಾ ಹವಾಲ್ದಾರ (45), ಪುತ್ರಿ ಐಶ್ವರ್ಯ (23), ಹಾಗೂ ಪುತ್ರ ಅಖಿಲೇಶ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ತಾಯಿ ರೇಣುಕಾ ಮೃತ ದೇಹ ಪತ್ತೆಯಾಗಿತ್ತು, ನಿನ್ನೆ ರಾತ್ರಿ ಐಶ್ವರ್ಯ ಹಾಗೂ ಅಖಿಲೇಶ ಮೃತ ದೇಹ ಪತ್ತೆಯಾಗಿವೆ.

ಒಂದು ವಾರದ ಹಿಂದೆ ಮೂವರು ನದಿಗೆ ಹಾರಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಮೊದಲು ಅನಾಥ ಶವಗಳೆಂದು ಪೊಲೀಸರು ಅವರ ಅಂತ್ಯಕ್ರಿಯೆ ನಡೆಸಿದ್ದರು.

ಮೂವರು ಕಾಣೆಯಾಗಿರುವ ಕುರಿತು ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣವನ್ನು ಪರೀಕ್ಷಿಸಿ ಕುಟುಂಬದ ಸದಸ್ಯರನ್ನು ಸ್ಥಳಕ್ಕೆ ಕರೆಯಿಸಿದ್ದರು. ಕುಟುಂಬದ ಸದಸ್ಯರು ಮೃತರ ಬಟ್ಟೆ ಪರಿಶೀಲಿಸಿದ ಮೇಲೆ ಮೃತರ ಗುರುತು ಪತ್ತೆಯಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

 

Leave a Comment