ಕೃಷಿ ಹೊಂಡ ಯೋಜನೆಗಳಲ್ಲಿ ದುರ್ಬಳಕೆ-ಆರೋಪ

ರಾಯಚೂರು.ನ.19- ಉದ್ಯೋಗ ಖಾತ್ರಿ, ಕೃಷಿ ಹೊಂಡ, ಡಿಬಿಟಿ ಯೋಜನೆ ಕೃಷಿ ಯಂತ್ರೋಪಕರಣಗಳಲ್ಲಿ ಖರೀದಿಗಳಲ್ಲಿ ಕಾನೂನನ್ನು ಉಲ್ಲಂಘಿಸಿ ಅವ್ಯವಹಾರಗಳಲ್ಲಿ ತೊ‌ಡಗಿದ್ದ ಸಹಾಯಕ ನಿರ್ದೇಶಕ ಸಂದೀಪ, ಗೋಪಾಲರೆಡ್ಡಿ, ಮಾನಸ, ಯಾಶ್ವಿನ್, ತ್ರಿವೇಣಿ ಇವರು ಅವ್ಯವಹಾರಗಳನ್ನು ಸಮಗ್ರ ತನಿಖೆ ನಡೆಸಿ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಶರಣಪ್ಪ ದಿನ್ನಿ ಆಗ್ರಹಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ಸಹಾಯಕ ನಿರ್ದೇಶಕ ಸಂದೀಪ ಸೇರಿದಂತೆ ಇನ್ನಿತರರು ಕೇಂದ್ರ ಮತ್ತು ರಾಜ್ಯ ಸರಕಾರವು ರೈತರಿಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು ಆದರೆ ಈ ಯೋಜನೆಯು ರೈತರು ಸದುಪಯೋಗ ಪಡೆದುಕೊಳ್ಳಲು ಅಸಮರ್ಥರಾಗಿದ್ದಾರೆ. ಆದರೆ ಅಧಿಕಾರಿಗಳು ಕಾನೂನುಗಳನ್ನು ಗಾಳಿಗೆ ತೂರಿ ತಮ್ಮ ಉದ್ಧಾರವನ್ನು ಮಾಡಿಕೊಳ್ಳುತ್ತಿದ್ದಾರೆ. ಡಿಬಿಟಿ ಯೋಜನೆಯಿಂದ 2017-18 ನೇ ಸಾಲಿನಲ್ಲಿ 99 ರೈತರಿಗೆ ಸಹಾಯಧನ ಬಿಡುಗಡೆ ಮಾಡಿರುತ್ತದೆ.
ಪ್ರತಿಯೊಂದು ರೈತರಿಗೆ 2 ಸಾವಿರದಿಂದ 3 ಸಾವಿರ ನೀಡಲಾಗಿದ್ದು ಆದರೆ ಅಧಿಕಾರಿಗಳು 14 ಜನರಿಗೆ ಮತ್ತು ಭೂಮಿಯಿಲ್ಲದವರಿಗೆ 5000, 4500, 3000 ಮತ್ತು 2000 ದಂತೆ ಕಾನೂನು ಉಲ್ಲಂಘಿಸಿ ರೈತರ ಖಾತೆಗೆ ಜಮಾ ಮಾಡಿ ಎತ್ತುವಳಿ ಮಾಡಿರುತ್ತಾರೆ. ಇದರಲ್ಲಿ ಒಟ್ಟು 8,66,460 ಇದ್ದು 14 ಜನರು ಸೇರಿ 5,35,905 ಇನ್ನುಳಿದ 85 ಜನರಿಗೆ ಯಾವುದೇ ದಾಖಲೆಯಿರುವುದಿಲ್ಲ. ಸಹಾಯಕ ನಿರ್ದೇಶಕ ಸಂದೀಪರವರು ತನ್ನ ಶಿಷ್ಯನಾದ ಅನ್ನಗಾರನಿಗೆ ಜೆಸಿಪಿಯನ್ನು ಕೊಡಿಸಿ ಹೋಬಳಿಯಲ್ಲಿ ನಡೆಯಲಿರುವ ಕೃಷಿ ಹೊಂಡಗಳನ್ನು ಇದೇ ಜೆಸಿಪಿಯಿಂದ ಮಾಡಿದ್ದಾರೆಂದು ಆರೋಪಿಸಿದರು. ಆದಕಾರಣ ಇವರ ಮೇಲೆ ಕ್ರಿಮಿನಲ್ ಕೇಸ್ ದಾಖಲೆ ಮಾಡಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚನ್ನಬಸವ ಯಕ್ಲಾಸಪೂರು, ಪ್ರಕಾಶ ಸಿರವಾರ, ಈರಪ್ಪ ಗಣಮೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment