ಕೃಷಿ ಹೊಂಡದಲ್ಲಿ ಮುಳುಗಿ

ಇಬ್ಬರು ಮೃತ್ಯು
ಬಾಗಲಕೋಟೆ, ಆ.೨೬- ಈಜಲು ಬಾರದೇ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.
ಸುಹಾಸ್ ನೀಲಣ್ಣವರ (೧೫), ಮೇಘರಾಜ ಪತ್ತಾರ (೧೪) ಮೃತಪಟ್ಟ ಬಾಲಕರು. ಸ್ನಾನ ಮಾಡಲು ಹೋಗಿ ಈ ಅವಘಡ ನಡೆದಿದೆ. ಶನಿವಾರ ಬಾಲಕರು ಮನೆಗೆ ಬಾರದೇ ಇದ್ದ ಕಾರಣ ಪೋಷಕರು ಪೊಲೀಸರ ಮೊರೆ ಹೋಗಿದ್ದರು. ಬಳಿಕ ಪೊಲೀಸರು ತಡರಾತ್ರಿ ಹುಡುಕಾಟ ನಡೆಸಿ ಕೃಷಿ ಹೊಂಡದಿಂದ ಇಬ್ಬರು ಬಾಲಕರ ಶವವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment