ಕೃಷಿ ಸಹಕಾರ ಸಂಘ ಉದ್ಘಾಟನೆ 10 ಕ್ಕೆ

 

ಕಲಬುರಗಿ ನ 8: ಜೇವರಗಿ ತಾಲೂಕಿನ ಕೋಳಕೂರು  ಗ್ರಾಮದಲ್ಲಿ ನವೆಂಬರ್ 10 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉದ್ಘಾಟನೆಗೊಳ್ಳಲಿದೆ.ಅಂದು ಬೆಳಿಗ್ಗೆ 10 ಗಂಟೆಗೆ ಸಿದ್ಧಬಸವೇಶ್ವರ ಕಲ್ಯಾಣಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು,ಶಾಸಕ ಡಾ.ಅಜಯಸಿಂಗ್ ಅವರು ಸಂಘಕ್ಕೆ ಚಾಲನೆ ನೀಡುವರು ಎಂದು ಸಂಘದ ಅಧ್ಯಕ್ಷ ಶಾಂತಲಿಂಗಪ್ಪಗೌಡ ಮಾಲಿ ಪಾಟೀಲ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಘಕ್ಕೆ 200 ಸದಸ್ಯರಿದ್ದು,ಕಾರ್ಯಕ್ರಮದಲ್ಲಿ ಸಾಲ ಪಡೆದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಗುವದು. ರಾಜ್ಯಗೃಹ ಸಹಕಾರ ಮಹಾಮಂಡಳದ ಸೋಮಶೇಖರ ಗೋನಾಯಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷಬಸವರಾಜ ವಾಲಿ,ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ,ಜಿಲ್ಲಾ ಜೆಡಿಎಸ್ ಅಧ್ಯಕ್ಷಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೇದಾರಲಿಂಗಯ್ಯ ಹಿರೇಮಠ,ಜಿಪಂಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ,ತಾಪಂ ಸದಸ್ಯಗುರುಶಾಂತಪ್ಪ ಸಿಕೇದ್,ಕೋಳಕೂರು ಗ್ರಾಪಂ ಅಧ್ಯಕ್ಷ ಅಮೃತಗೌಡ ಪೇಠಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಗುರುಶಾಂತಪ್ಪ ಸಿಕೇದ್, ಶರಣಬಸಪ್ಪ ಹೊನಕೇರಿ ಉಪಸ್ಥಿತರಿದ್ದರು..

Leave a Comment