ಕೃಷಿ ವಿ.ವಿಗೆ 25 ಕೋಟಿ ಅನುದಾನ

ಧಾರವಾಡ,ಜ17- ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ವಿಶ್ವಬ್ಯಾಂಕ್ ನೆರವಿನಿಂದ (NAHEP) ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆ (ಐಸಿಎಆರ್) ಅಡಿಯಲ್ಲಿ ಸಂಸ್ಥೆಯ ಅಭಿವೃದ್ಧಿ ಯೋಜನೆಗೆ 25 ಕೋಟಿ ರೂ ಅನುದಾನ ದೊರೆತಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ರಫ್ತಾರ, ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ ಜ್ಞಾನ ಪಾಲುದಾರದಿಂದ ಕೃಷಿ ವಿಶ್ವವಿದ್ಯಾಲಯಕ್ಕೆ ಕೃಷಿ ಉದ್ಯಮ ಶೀಲತಾ ಮಾರ್ಗದರ್ಶನ ಕಾರ್ಯಕ್ರಮಕ್ಕೆ 3.23 ಕೋಟಿ ಅನುದಾನ ಲಭಿಸಿದೆ. ಸಿರಿಧಾನ್ಯಗಳ ಪೌಷ್ಠಿಕ ಸಂಯೋಜನೆ, ಮೌಲ್ಯವರ್ಧನೆ ಹಾಗೂ ವಾಣಿಜ್ಯೀಕರಣ ಕಾರ್ಯಕ್ಕೆ 1.83 ಕೋಟಿ ಅನುದಾನ (ICAR-NAE) ಲಭಿಸಿದೆ ಎಂದು ಕುಲಪತಿ ಡಾ. ಎಂ.ಬಿ. ಚೆಟ್ಟಿ ಹೇಳಿದರು.

Leave a Comment