ಕೃಷಿ ಬೆಳೆಗಾರರ ಸಂಕಷ್ಟ ಪರಿಹರಿಸಲು ಒತ್ತಾಯ

 

ಕಲಬುರಗಿ,ಏ.2-ಜಿಲ್ಲೆಯ ಆಳಂದ ತಾಲ್ಲೂಕಿನ ಲಾಡ್ ಚಿಂಚೋಳ್ಳಿ ಗ್ರಾಮದ ರೈತನೊಬ್ಬ ತಾನು ಬೆಳೆದಿರುವ ಕಲ್ಲಂಗಡಿಯನ್ನು ಮಾರಲಾರದೆ ನಷ್ಟಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ಕೃಷಿ ಬೆಳೆಗಾರರ ಸಂಕಷ್ಟ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತ-ಕೃಷಿ ಕಾರ್ಮಿಕ ಸಂಘಟನೆ (ಆರ್.ಕೆ.ಎಸ್.)ಜಿಲ್ಲಾಧ್ಯಕ್ಷ ಗಣಪತರಾವ ಕೆ.ಮಾನೆ ಒತ್ತಾಯಿಸಿದ್ದಾರೆ..

ಬರಗಾಲ ಬೆಂಬಲ ಬೆಲೆ ಸಿಗದೆ ಭಾರಿ ಹೋಡತಕ್ಕೆ ಸಿಲುಕಿರುವ ರೈತನು ತನ್ನ ಭವಿಷ್ಯದ ಬಗೆಗಿನ ಎಲ್ಲಾ ಭರವಸೆಯನ್ನು ಬಿಟ್ಟಿರುವ ಈ ಸಂದರ್ಭದಲ್ಲಿಯೇ ಕೊರೊನಾ ಸೋಂಕು ಹರಡದಂತೆ ತಡೆಯಲು  ಕೇಂದ್ರ ಸರಕಾರವು ದೇಶವನ್ನೇ ಲಾಕ್ ಡೌನ್ ಮಾಡಿದ್ದು, ಇದರ ಪರಿಣಾಮವಾಗಿ ಗ್ರಾಮೀಣ ಜನತೆಗೆ ದಿಕ್ಕು ತೋಚದಂತಾಗಿದೆ. ಉದ್ಯೋಗ , ಕಸುಬನ್ನು ಕಳೆದುಕೊಂಡು ಅತಂತ್ರ ಸ್ಥಿಯಲ್ಲಿದ್ದಾರೆ. ಮುಖ್ಯವಾಗಿ ಹೈನುಗಾರಿಕೆ, ತರಕಾರಿ, ಹಣ್ಣುಗಳನ್ನು ಬೆಳೆಯುವ ರೈತರು ತಮ್ಮ ಬೆಳೆ ಮಾರಟವಾಗದಿದ್ದಕ್ಕಾಗಿಯೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರು ಎದೆಗುಂದದೆ ಒಂದಾಗಿ ತಮ್ಮ ಬೇಡಿಕೆಗಳನ್ನು ಸರಕಾರಕ್ಕೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಾಗಿದೆ . ಇದಕ್ಕೆ ಆತ್ಮಹತ್ಯಯೇ ಪರಿಹಾರವಲ್ಲ ಬದಲಿಗೆ ಒಗ್ಗಟ್ಟಿನ ಪ್ರಯತ್ನ ಪರಿಹಾರವಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರಸರಕಾರವು ಆತಂಕಕ್ಕೋಳಗಾಗಿರುವ ರೈತ-ಕೃಷಿಕಾರ್ಮಿಕರ ಬೆಳೆಯನ್ನು ಖರಿದಿಸಲು ಮುಂದಾಗಿ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಯುದ್ದೋಪಾಧಿಯಲ್ಲಿ ಕಾರ್ಯ ಕೈಗೋಳ್ಳಬೇಕೆಂದು ಆಗ್ರಹಿಸಿದ್ದಾರೆ.

Leave a Comment